ನಾಯಿ ಅಥವಾ ಮಂಗ ಕಚ್ಚಿದಲ್ಲಿ 2 ಲಕ್ಷ ರೂ.ಗಳ ಪರಿಹಾರ: ಸರಕಾರಕ್ಕೆ ಹೈಕೋರ್ಟ್ ಆದೇಶ

ಶನಿವಾರ, 11 ಏಪ್ರಿಲ್ 2015 (15:09 IST)
ನಾಯಿ ಅಥವಾ ಮಂಗ ಕಚ್ಚಿದಲ್ಲಿ ಅಂತಹ ವ್ಯಕ್ತಿಗೆ ಸರಕಾರ ಎರಡು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಉತ್ತರಾಖಂಡ್ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ.

ನಾಯಿ ಅಥವಾ ಮಂಗ ಕಚ್ಚಿದ ವ್ಯಕ್ತಿಗೆ ನಗರಸಭೆ ಮತ್ತು ರಾಜ್ಯ ಸರಕಾರ ತಲಾ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ಒಂದು ವಾರದೊಳಗೆ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಅಲೋಕ್ ಸಿಂಗ್ ಮತ್ತು ಸರ್ವೇಶ್ ಕುಮಾರ್ ನೇತೃತ್ವದ ನ್ಯಾಯಪೀಠ, ನಾಯಿ ಅಥವಾ ಮಂಗ ಕಚ್ಚಿದ ವ್ಯಕ್ತಿಯ ಗಾಯ ಸಾಮಾನ್ಯವಾಗಿದ್ದಲ್ಲಿ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡಲ್ಲಿ 2 ಲಕ್ಷ ರೂಪಾಯಿಗಳ ಪರಿಹಾರ ನೀಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನೈನಿತಾಲ್ ಪಟ್ಟಣವೊಂದರಲ್ಲಿಯೇ ನಾಯಿ ಕಚ್ಚಿದ 4 ಸಾವಿರ ಘಟನೆಗಳು ವರದಿಯಾಗಿವೆ. ನಾಯಿಗಳ ನಿಯಂತ್ರಣಕ್ಕಾಗಿ ಅಗತ್ಯವಾದ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ