ಜನಾದೇಶ ಅವಮಾನಿಸಿದ ರಾಹುಲ್ ಕ್ಷಮೆಗೆ ಬಿಜೆಪಿ ಆಗ್ರಹ

ಭಾನುವಾರ, 19 ಏಪ್ರಿಲ್ 2015 (17:46 IST)
ರಾಮಲೀಲಾ ಮೈದಾನದಲ್ಲಿ ನಡೆದ ರೈತರ ರಾಲಿಯಲ್ಲಿ ಅತ್ಯಂತ ಜನಪ್ರಿಯ ಜನಾದೇಶವನ್ನು ಅವಮಾನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಕ್ಷಮೆಯಾಚಿಸಬೇಕು ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಪ್ರತಿದಾಳಿ ಮಾಡಿದ್ದಾರೆ. 
 
 ರಾಹುಲ್ ರೈತರ ಸಮಾವೇಶದಲ್ಲಿ ನರೇಂದ್ರ ಮೋದಿ ಬಡವರ ವಿರೋಧಿ ಮತ್ತು ರೈತ ವಿರೋಧಿ ಎಂದು ಹೇಳಿದ್ದರು. ಕಾರ್ಪೊರೇಟ್‌ಗಳ ಋಣ ತೀರಿಸಲು ಪ್ರಧಾನಮಂತ್ರಿ ರೈತರ ಭೂಮಿ ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು. 
 
ಗುಜರಾತ್ ಮಾದರಿಯ ಭೂಸ್ವಾಧೀನದ ಬಗ್ಗೆ ರಾಹುಲ್ ಪ್ರತಿಕ್ರಿಯೆಯನ್ನು ಟೀಕಿಸಿ, ರಾಬರ್ಟ್ ವಾದ್ರಾ ಅವರ ಅಭಿವೃದ್ಧಿ ಮತ್ತು ಭೂಸ್ವಾಧೀನವನ್ನು ಪ್ರಶ್ನಿಸಿದರು.  ಕೈಗಾರಿಕೋದ್ಯಮಿಗಳಿಂದ ಸಾಲ ಪಡೆದು ನಾವು ಗೆದ್ದಿದ್ದೇವೆ ಎಂದು ರಾಹುಲ್ ಹೇಳುತ್ತಾರೆ. ರಾಷ್ಟ್ರದ ಜನಾದೇಶವನ್ನು ಅವರು ಈರೀತಿ ತಮಾಷೆ ಮಾಡಲು ಅವಕಾಶವಿದೆಯಾ? ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದರು.
 
 ರಾಹುಲ್ ಅವರು ಆತ್ಮಾವಲೋಕನಕ್ಕಾಗಿ ವಿದೇಶಕ್ಕೆ ನಿಗೂಢ ಕಣ್ಮರೆಯಾಗಿದ್ದನ್ನು ಟೀಕಿಸುತ್ತಾ, ಮೋದಿ ಮೂರು ರಾಷ್ಟ್ರಗಳ ಪ್ರವಾಸದಿಂದ ದೇಶಕ್ಕೆ ಗೌರವ ಮತ್ತು ದೊಡ್ಡ ಒಪ್ಪಂದಗಳನ್ನು ಮಾಡಿಕೊಂಡಿದ್ದು, ದಿಢೀರ್ ನಾಪತ್ತೆಯಾಗಲಿಲ್ಲ ಎಂದು ಛೇಡಿಸಿದರು. 

ವೆಬ್ದುನಿಯಾವನ್ನು ಓದಿ