ರಾಜೇ, ಸುಷ್ಮಾ, ಚೌಹಾನ್ ರಕ್ಷಣೆಗೆ ಮುಂದಾದ ಮೋದಿ ಸರಕಾರ

ಸೋಮವಾರ, 20 ಜುಲೈ 2015 (19:59 IST)
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಸಿಲುಕಿರುವ ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಮತ್ತು ಶಿವರಾಜ್ ಸಿಂಗ್ ಚೌಹಾನ್ ಅವರನ್ನು ರಕ್ಷಿಸಲು ಮೋದಿ ಸರಕಾರ ತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. 
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಅರುಣ್ ಜೇಟ್ಲಿ, ಸ್ವರಾಜ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ವಸುಂಧರಾ ರಾಜೇ ಮತ್ತು ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.  
 
ಯಾವುದೇ ಕಾರಣಕ್ಕೂ ಸಚಿವರ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ. ವಿಪಕ್ಷಗಳನ್ನು ಯಾವ ರೀತಿ ಹಣಿಯಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಸುಷ್ಮಾ ಸ್ವರಾಜ್, ರಾಜೇ ಮತ್ತು ಚೌಹಾನ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಗಾರು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ
 

ವೆಬ್ದುನಿಯಾವನ್ನು ಓದಿ