ಫಲಿತಾಂಶಕ್ಕೆ ಮುನ್ನವೇ ಸರ್ಕಾರ ರಚನೆಗೆ ಬಿಜೆಪಿ ಸಮಾಲೋಚನೆ

ಗುರುವಾರ, 15 ಮೇ 2014 (10:28 IST)
ನಾಳೆ ಲೋಕಸಭೆ ಚುನಾವಣೆ ಮತಎಣಿಕೆ ಬಳಿಕ ಫಲಿತಾಂಶ ಹೊರಬೀಳಲಿದ್ದು, ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವುದರಿಂದ ಬಿಗಿ ಭದ್ರತೆ ಒದಗಿಸಲು ಕೇಂದ್ರಸರ್ಕಾರ ನಿರ್ಧರಿಸಿದೆ.  ಫಲಿತಾಂಶಕ್ಕಾಗಿ ಎಲ್ಲ ಪಕ್ಷಗಳೂ ಕಾತುರದಿಂದ ಕಾಯುತ್ತಿವೆ.  ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿದ್ದು, ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ಸಂಪುಟದಲ್ಲಿ  ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ವಿಚಾರವಿನಿಮಯ ನಡೆಸಲಾಗುತ್ತಿದೆ.

ಈ ನಡುವೆ ಆರ್‌ಎಸ್‌ಎಸ್ ಮುಖಂಡರು ರಾಜನಾಥ್ ಸಿಂಗ್ ಮನೆಯಲ್ಲಿ ಸಭೆ ನಡೆಸಲಿದ್ದು, ಬಿಜೆಪಿಗೆ ಮಾರ್ಗದರ್ಶನ ಮಾಡಲಿದೆ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಎಲ್ಲರೂ ದೆಹಲಿ ತಲುಪಿದ್ದು, ಅಡ್ವಾಣಿ ಭವಿಷ್ಯವನ್ನು ಕೂಡ ನಿರ್ಧರಿಸಲಿದೆ. ರಾಜನಾಥ್ ಸಿಂಗ್ ಅಧ್ಯಕ್ಷರಾಗಿ ಮುಂದುವರಿಯಬೇಕೇ ಅಥವಾ ಕ್ಯಾಬಿನೆಟ್‌ಗೆ ಸೇರುತ್ತಾರೆಯೇ ಎಂಬ ಬಗ್ಗೆ ಆರ್‌ಎಸ್‌ಎಸ್ ನಿರ್ಧರಿಸಲಿದೆ.
 
ಮೋದಿ ಪ್ರಧಾನ ಮಂತ್ರಿಯಾದರೆ ಅವರ ರಕ್ಷಣೆಗಾಗಿ ಬುಲೆಟ್ ಪ್ರೂಫ್ ವಾಹನ ,ಮೊಬೈಲ್ ಜಾಮರ್‌ಗಳು ಸಜ್ಜಾಗಿವೆ. ಮೋದಿ ಪತ್ನಿ ಭದ್ರತೆ ಹಿನ್ನೆಲೆಯಲ್ಲಿ ಅವರನ್ನು ಬೇರೆ ಕಡೆ ಸ್ಥಳಾಂತರಿಸುವ ಸಂಭವವಿದೆ. 

ವೆಬ್ದುನಿಯಾವನ್ನು ಓದಿ