ಮನಮೋಹನ್ ಸಿಂಗ್‌ಗೆ ತಿರುಗೇಟು ನೀಡಿದ ಬಿಜೆಪಿ

ಬುಧವಾರ, 27 ಮೇ 2015 (14:30 IST)
ತಮ್ಮ ಸರಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹರಿಹಾಯ್ದಿರುವ ಹಿನ್ನೆಲೆಯಲ್ಲಿ  ಬಿಜೆಪಿ ಅವರಿಗೆ ಖಾರವಾಗಿ ತಿರುಗೇಟು ನೀಡಿದೆ. 
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ, "ಪ್ರಧಾನಿಯಾಗಿ ಭೃಷ್ಟಾಚಾರದ ನಡೆದಾಗ ಸುಮ್ಮನಿದ್ದಿದ್ದೇಕೆ? 2ಜಿ ಸ್ಪ್ರೆಕ್ಟ್ರ ಹಗರಣದ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕಿದೆ", ಎಂದು ಆಗ್ರಹಿಸಿದ್ದಾರೆ. 
 
"ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ನಡೆದಿದೆ. ಅದು ಕೂಡ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿಯೇ. ಕಲ್ಲಿದ್ದಲು ಹಂಚಿಕೆಯಲ್ಲಿ ಭೃಷ್ಟಾಚಾರ ನಡೆದಿದ್ದು ಸುಳ್ಳಾ? ಎಂದು ಅಮಿತ್ ಶಾ ಸಿಂಗ್", ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ.
 
ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಸಹ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದು "ಸಿಂಗ್ ಮೌನ ಮುರಿದು ಮಾತನಾಡಿರುವುದು ಒಂದು ದೊಡ್ಡ ವ್ಯಂಗ್ಯ. ಅವರು ಮಾತನಾಡಬೇಕಾದ ಅಗತ್ಯವಿದ್ದಾಗ ಮಾತನಾಡಲಿಲ್ಲ. ಈಗ ಅವರು ಸ್ವ ರಕ್ಷಣೆಗಾಗಿ ಮಾತನಾಡಿದ್ದಾರೆ. ದೇಶಕ್ಕಾಗಲ್ಲ" ಎಂದು ಮಾಜಿ ಪ್ರಧಾನಿಗೆ ಪ್ರತ್ಯುತ್ತರ ನೀಡಿದ್ದಾರೆ.  
 
"ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಭೃಷ್ಟಾಚಾರ ತಾಂಡವಾಡುತ್ತಿತ್ತು.  ಬೆಲೆ ಏರಿಕೆ, ಭೃಷ್ಟಾಚಾರದಿಂದ ಜನರು ತತ್ತರಿಸಿ ಹೋಗಿದ್ದರು. ಮೋದಿ ಸರಕಾರದಿಂದ ದೇಶ ಭೃಷ್ಟಾಚಾರ ಮುಕ್ತವಾಗಿದೆ. ಮುರಿದಿರುವ ಅರ್ಥವ್ಯವಸ್ತೆಯ ಜೋಡನೆಗೆ ನಮ್ಮ ಸರ್ಕಾರ ಪ್ರಯತ್ನ ನಡೆಸಿದೆ", ಎಂದು ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರಕ್ಕೆ ನೇರ ಆರೋಪ ಹೊರಿಸಿರುವ ಪಾತ್ರ ತಮ್ಮ ಸರಕಾರದ ಸಾಧನೆಗಳ ಕುರಿತು ಹೇಳಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ