ಬಿಜೆಪಿ ಗೂಂಡಾಗಳ ಪಕ್ಷ, ದಲಿತ ವಿರೋಧಿ ಪಕ್ಷ : ಕೇಜ್ರಿವಾಲ್

ಗುರುವಾರ, 9 ಜೂನ್ 2016 (19:24 IST)
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಎಂಸಿಡಿ ಮೂರು ವಿಭಾಗಗಳ ಸಭೆಯಲ್ಲಿ ಬಿಜೆಪಿ ನಗರಸಭಾ ಸದಸ್ಯ ನೀರಜ್ ಗುಪ್ತಾ, ಆಪ್ ಪಕ್ಷದ ಕಾರ್ಪೋರೇಟರ್ ನೀರಜ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
 
ದೆಹಲಿ ಮುನ್ಸಿಪಲ್ ಕಾರ್ಪೋರೇಠನ್(ಎಂಸಿಡಿ)‌ನ ವಿಶೇಷ ಜಂಟಿ ಅಧಿವೇಶನ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯನೊಬ್ಬ ಆಮ್ ಆದ್ಮಿ ಪಕ್ಷದ ಕಾರ್ಪೋರೇಟರ್ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
 
ಆಪ್ ಪಕ್ಷದ ರಾಕೇಶ್ ಕುಮಾರ್ ಪಕ್ಷದ ಚಿಹ್ನೆಯಿರುವ ಟೋಪಿ ಧರಿಸಿದ್ದರು. ಅದನ್ನು ಕೆಲವು ಕಾರ್ಪೋರೇಟರ್‌ಗಳು ವಿರೋಧಿಸಿದರು. ಟೋಪಿ ತೆಗೆಯುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದಾಗ, ರಾಕೇಶ್ ನಿರಾಕರಿಸಿದರು ಎನ್ನಲಾಗಿದೆ. ವಾದ ತಾರಕಕ್ಕೇರಿದಾಗ ಬಿಜೆಪಿಯ ಒಬ್ಬ ಸದಸ್ಯ ಟೋಪಿ ತೆಗೆದರೆ ಮತ್ತೊಬ್ಬ ಸದಸ್ಯ ಹಲ್ಲೆ ಮಾಡುತ್ತಿರುವುದು ಕಂಡು ಬಂದಿತು. 
 
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಗೂಂಡಾಗಳ ಪಕ್ಷವಾಗಿದೆ ದಲಿತ ವಿರೋಧಿ ಪಕ್ಷವಾಗಿದೆ. ಬಿಜೆಪಿ ದೇಶಾದ್ಯಂತ ದಲಿತರನ್ನು ವ್ಯವಸ್ಥಿತವಾಗಿ ತುಳಿಯುತ್ತದೆ ಎಂದು ಗುಡುಗಿದ್ದಾರೆ. 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ