ಬಿಜೆಪಿ ಅಮೇರಿಕನ್ ಪಾರ್ಟಿ ಎಂದ ಲಾಲು ಪ್ರಸಾದ್

ಗುರುವಾರ, 29 ಜನವರಿ 2015 (15:43 IST)
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರ ಮೂರು ದಿನಗಳ ಭಾರತ ಭೇಟಿಯ ನೆರಳಿನಲ್ಲಿ ಅದಕ್ಕೆ ಸಂಬಂಧಿಸಿದಂತೆ ಕೇಸರಿ ಪಕ್ಷದ ಮೇಲೆ ಪ್ರಹಾರ ನಡೆಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಬಿಜೆಪಿ ಅಮೆರಿಕನ್ ಪಾರ್ಟಿ ಎಂದು ವ್ಯಂಗ್ಯವಾಡಿದ್ದಾರೆ.
 
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಮೇರಿಕನ್ ಅಧ್ಯಕ್ಷರ ಭೇಟಿಗೆ ನೀಡಿದ ಮಹತ್ವವನ್ನು ನೋಡಿದರೆ ಬಿಜೆಪಿ ಅಮೇರಿಕನ್ ಪಕ್ಷ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಅಣಕವಾಡಿದ್ದಾರೆ. 
 
ಅದೇ ಸಂದರ್ಭದಲ್ಲಿ ಸಿರಿ ಪೋರ್ಟ್‌ನಲ್ಲಿ ಒಬಾಮಾ ಮಾಡಿದ ಭಾಷಣಕ್ಕಾಗಿ ಅವರು ಅಮೇರಿಕಾದ ಅಧ್ಯಕ್ಷನನ್ನು ಹೊಗಳಿದ್ದಾರೆ. ಭಾರತ ವರ್ಣ ಮತ್ತು ಧರ್ಮಗಳ ಆಧಾರದಲ್ಲಿ ಒಡೆಯಬಾರದು ಎಂದು ಒಬಾಮಾ ಹೇಳಿದ್ದರು. ಕಳೆದ ಅನೇಕ ವರ್ಷಗಳಿಂದ ಇದನ್ನೇ ಮಾಡುತ್ತಿರುವ ಬಿಜೆಪಿಯನ್ನು ಉದ್ದೇಶಿಸಿ ಅಮೇರಿಕಾದ ಅಧ್ಯಕ್ಷ ಈ ಮಾತುಗಳನ್ನಾಡಿದ್ದಾರೆ ಎಂದು ಲಾಲು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ