ಬಿಜೆಪಿ ನನ್ನ ಮೊದಲ ಮತ್ತು ಕೊನೆಯ ಪಕ್ಷ : ಶತ್ರುಘ್ನ ಸಿನ್ಹಾ

ಶುಕ್ರವಾರ, 26 ಫೆಬ್ರವರಿ 2016 (14:38 IST)
ಸದಾ ಟೀಕಿಸುವ ಮೂಲಕ ಸ್ವಪಕ್ಷವನ್ನು ಮುಜುಗರಕ್ಕೆ ಒಳಗಾಗಿಸುತ್ತಿರುವ ನಟ ಪರಿವರ್ತಿತ ರಾಜಕಾರಣಿ, ಸಂಸದ ಶತ್ರುಘ್ನ ಸಿನ್ಹಾ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ತಮ್ಮ ಪಕ್ಷದ ನಾಯಕರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದು ಬಿಜೆಪಿ ನನ್ನ ಮೊದಲ ಮತ್ತು ಕೊನೆಯ ಪಕ್ಷ ಬಿಜೆಪಿ ಎಂದು ಹೇಳಿದ್ದಾರೆ. ಆ ಮೂಲಕ ತಾವು ಪಕ್ಷಾಂತರ ಮಾಡುವ ಉದ್ದೇಶದಿಂದ ಬಿಜೆಪಿ ವಿರುದ್ಧ ಟೀಕೆಗಿಳಿದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. 
 
ತಾವು ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವವನ್ನು ಹೊಂದಿರುವುದಾಗಿ ಅವರು ಹೇಳಿದ್ದು, ಬಿಹಾರದಲ್ಲಿ ಅವಮಾನಕರ ಸೋಲುಣ್ಣಲು ಕಾರಣರಾದವರು ಈ ಮಾತನ್ನು ಹೇಳುತ್ತಿದ್ದಾರೆ. ತಮ್ಮ ಮುಖವನ್ನೆತ್ತಿ ತೋರಿಸಲು ಸಮರ್ಥರಲ್ಲದವರು ನನಗೆ ಈ ಸಲಹೆಯನ್ನು ನೀಡುತ್ತಿದ್ದಾರೆ. ತಮ್ಮ ಹತಾಶೆಯನ್ನು ಈ ಪರಿಯಲ್ಲಿ ಅವರು ಹೊರಹಾಕುತ್ತಿದ್ದಾರೆ. ಮೊದಲು ಅವರು ಪಕ್ಷಕ್ಕೆ ತಾವು ನೀಡಿರುವ ಯೋಗದಾನವನ್ನು ವಿಮರ್ಶಿಸಿಕೊಳ್ಳಲಿ ಎಂದು ಸಿನ್ಹಾ ಹೇಳಿದ್ದಾರೆ. 
 
ಅವರು ಮೊದಲು ತಾವು ಪಕ್ಷಕ್ಕೆ ಏನು ಕೊಟ್ಟಿದ್ದೇವೆ ಎಂದು ನೋಡಿಕೊಳ್ಳಲಿ. ಅವರು ಅವಮಾನಕರ  ಸೋಲನ್ನು ಕಂಡಿದ್ದಾರೆ. ಸಣ್ಣ ಬುದ್ಧಿಯ ಕೆಲವರು ಈ ಮಾತುಗಳನ್ನಾಡುತ್ತಿದ್ದಾರೆ. ಭಾರತೀಯ ಜನಾ ಪಕ್ಷ ನನ್ನ ಮೊದಲ ಮತ್ತು ಕೊನೆಯ ಪಕ್ಷ ಎಂದು ಸಿನ್ಹಾ ತಮ್ಮ ವಿರುದ್ಧ ಮಾತನಾಡಿರುವ ಬಿಹಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. 
 
ನಾನು ನನ್ನ ಪಕ್ಷದ, ಸಂವಿಧಾನದ, ದೇಶದ ವಿರುದ್ಧ ಎಂದಿಗೂ ನಡೆದುಕೊಂಡಿಲ್ಲ. ನನ್ನ ಮಾತೃಭೂಮಿಯನ್ನು ಪ್ರೀತಿಸುತ್ತೇನೆ. ಭಾರತೀಯನೆಂಬ ಹೆಮ್ಮೆ ನನಗಿದೆ. ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಪ್ರಧಾನಿ ಮೋದಿಯವರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ