ಮೋದಿ ವಿಷಕಾರಿಯುಕ್ತ ಭಾಷಣ ಮಾಡುವುದರಲ್ಲಿ ನಿಸ್ಸಿಮರು: ನಿತೀಶ್ ಕುಮಾರ್ ಲೇವಡಿ

ಮಂಗಳವಾರ, 19 ಆಗಸ್ಟ್ 2014 (19:45 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ವಿಷಕಾರಿಯಾದ ಭಾಷಣಗಳನ್ನು ಮಾಡುತ್ತಾ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಉಹಾಪೋಹ ವರದಿಗಳನ್ನು ಹರಡಿಸುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ ಎಂದು ಸಾರಣ್ ಜಿಲ್ಲೆಯ ಛಾಪ್ರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಜೆಡಿಯು ನಾಯಕ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದಾರೆ.  
 
ದೇಶದಲ್ಲಿ ಕೋಮುವಾದ ಶಕ್ತಿಗಳನ್ನು ನಿಯಂತ್ರಿಸಲು ಜೆಡಿಯು ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್‌‌‌ ಒಂದಾಗಿ ಹೋರಾಟ ನಡೆಸಲಿವೆ. ಬಿಹಾರದಲ್ಲಿ ಬಿಜೆಪಿಯನ್ನು ಸದಡಬಡೆಯಲು ಇದೊಂದೆ ಏಕಮಾತ್ರ ಉಪಾಯವಾಗಿದೆ. ವಿಷಕಾರಿ ದುಷ್ಟಾಶಕ್ತಿಗಳನ್ನು ತಡೆಯಲು ಆರ್‌ಜೆಡಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌‌‌‌ರೊಂದಿಗೆ ಕೈಜೋಡಿಸಿದ್ದೇವೆ ಎಂದು ಮೈತ್ರಿಯ ಅಂಶವನ್ನು ಬಹಿರಂಗಪಡಿಸಿದ್ದಾರೆ. 
 
ಆಗಸ್ಟ್‌‌‌‌ 21 ರಂದು ಬಿಹಾರದ 10 ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಪ್ರಚಾರಕ್ಕಾಗಿ ಲಾಲೂರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ನಿತೀಶ್‌‌, ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಎದುರಾಗಿದ್ದರಿಂದ ಲಾಲು ಪ್ರಸಾದ್ ಯಾದವ್ ಮತ್ತು ನಾನು ಪರಸ್ಪರ ದೂರವಾಗಲು ಕಾರಣವಾಗಿತ್ತು ಎಂದು ತಿಳಿಸಿದ್ದಾರೆ. 
 
ಮುಂಬರುವ 2015 ರಲ್ಲಿ ನಡೆಯಲಿರುವ ಬಿಹಾರದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬರುವುದನ್ನು ತಡೆಯಲು ನಾವು ಲಾಲೂರೊಂದಿಗೆ ಕೈಜೋಡಿಸಿದ್ದೇವೆ ಎಂದು ತಿಳಿಸಿದ್ದಾರೆ. 
 
ಮತಗಳ ವಿಭಜನೆಯಿಂದಾಗಿ ಜಾತ್ಯಾತೀತ ಶಕ್ತಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲು ಉಂಟಾಗಿತ್ತು.. ಪ್ರಮುಖ ಪಕ್ಷಗಳಾದ ರಾಷ್ಟ್ರೀಯ ಜನತಾದಳ, ಜೆಡಿಯು ಮತ್ತು ಕಾಂಗ್ರೆಸ್‌‌‌ ಒಂದಾಗಿ ಬಿಜೆಪಿಯ ವಿರುದ್ಧ ಒಂದಾಗಿದ್ದರಿಂದ ಈ ಬಾರಿ ಮತ ವಿಭಜನೆಯಾಗಲು ಸಾದ್ಯವಿಲ್ಲ ಎಂದು ರಾಷ್ಟ್ರೀಯ ಜನತಾದಳದ ಪ್ರಮುಖ ನಾಯಕ ಲಾಲೂ ಪ್ರಸಾದ್‌ ಯಾದವ್‌ ತಿಳಿಸಿದ್ದಾರೆ. 
 
ಲಾಲೂ ಪ್ರಸಾದ್‌ ಯಾದವ್ ಸಭೆಯನ್ನುದೇಶಿಸಿ ಮಾತನಾಡುತ್ತ, ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಜನರಿಗೆ ಮೋದಿ ಮೋಸಮಾಡಿದ್ದಾರೆ. ನಾವು ಬಿಜೆಪಿಯ ಮೋಸದ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ