ಆಮೀರ್‌ಖಾನ್ ಅಸಹಿಷ್ಣುತೆ ಹೇಳಿಕೆಗೆ ಬಿಜೆಪಿ ತಿರುಗೇಟು

ಮಂಗಳವಾರ, 24 ನವೆಂಬರ್ 2015 (15:11 IST)
ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ ವಿವಾದ ಸಷ್ಟಿಸಿದ್ದು, ಕೆಲವರ ಟೀಕೆಗೆ ಕಾರಣವಾಗಿದ್ದರೆ ಕೆಲವರು ಖಾನ್ ಅವರನ್ನು ಬೆಂಬಲಿಸಿ ಸರಕಾರ ಅಸಹಿಷ್ಣುತೆ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
     
ಆಮೀರ್ ಖಾನ್, ಬಾಲಿವುಡ್ ಬಾದಶಾಹ ಶಾರುಕ್ ಖಾನ್ ಅವರನ್ನು ಬೆಂಬಲಿಸಿದ್ದಲ್ಲದೇ ಸಾಹಿತಿಗಳು ಮತ್ತು ಚಿತ್ರನಿರ್ಮಾಪಕರ ಅಸಹಿಷ್ಣುತೆ ಹೋರಾಟಕ್ಕೆ ಸೇರ್ಪಡೆಯಾದಂತಾಗಿದ್ದಾರೆ.  
 
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಆತಂಕದಿಂದಾಗಿ ಮಗುವಿನ ಸುರಕ್ಷತೆಯ ಭಯದಿಂದಾಗಿ ದೇಶವನ್ನೇ ತೊರೆದು ಹೋಗುವಂತೆ ಪತ್ನಿ ಕಿರಣ್ ಸಲಹೆ ನೀಡಿದ್ದಳು ಎಂದು ಆಮೀರ್ ಖಾನ್ ಹೇಳಿಕೆ ನೀಡಿದ್ದರು.   
 
ಆಮೀರ್ ಖಾನ್ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ನಟ. ಅಂತಹ ವ್ಯಕ್ತಿ ಇಂತಹ ಹೇಳಿಕೆ ನೀಡಲು ಹೇಗೆ ಸಾಧ್ಯ? ಖಾನ್ ದೇಶ ತೊರೆಯುವುದು ಬೇಡ. ಭಾರತದಂತಹ ದೇಶ ಮತ್ತೊಂದಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸಲಹೆ ನೀಡಿದ್ದಾರೆ.
 
ಪಾತ್ರಾ ಅವರನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಆಮೀರ್ ಖಾನ್ ಹೇಳಿಕೆ ದುರದೃಷ್ಟಕರ. ಆಮೀರ್ ಖಾನ್‌ಗೆ ಭಾರತ ಎಲ್ಲವನ್ನು ಕೊಟ್ಟಿದೆ ಎಂದರು.

ವೆಬ್ದುನಿಯಾವನ್ನು ಓದಿ