ಗೋಹತ್ಯೆ ಆರೋಪದ ಮೇಲೆ ಬಂಧಿತನಾದ ಬಿಜೆಪಿ ಮುಖಂಡನ ಉಚ್ಚಾಟನೆ

ಸೋಮವಾರ, 1 ಫೆಬ್ರವರಿ 2016 (17:22 IST)
ಗೋಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೇವಾಸ್ ಜಿಲ್ಲೆಯ ಟೋನ್‌ಖಉರ್ದ್ ಮಂಡಲ್‌ನ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷನಾಗಿದ್ದ ಅನ್ವರ್ ಮೆವ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಮನೆಯಲ್ಲಿಯೇ ಗೋಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತನಾದ ಅನ್ವರ್ ಮೆವ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ವಕ್ತಾರ ಡಾ.ಹಿತೇಶ್ ಬಾಜ್‌ಪೈ ತಿಳಿಸಿದ್ದಾರೆ.
 
ಮಧ್ಯಪ್ರದೇಶ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಅನ್ವರ್ ಮೆವ್ ಮತ್ತು ಇತರ ಒಂಬತ್ತು ಮಂದಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ರಾಜೇಶ್ ರಘುವಂಶಿ ತಿಳಿಸಿದ್ದಾರೆ.
 
ಮಣಿಯಾರಪುರದ ಅನ್ವರ್ ಮೆವ್ ಮನೆಯಲ್ಲಿ ಗೋಹತ್ಯೆ ಕೃತ್ಯ ನಡೆದಿರುವುದು ಬಹಿರಂಗವಾಗುತ್ತಿದ್ದಂತೆ ಪಟ್ಟಣದಾದ್ಯಂತ ಬಲಪಂಥೀಯ ಸಂಘಟನೆಗಳು ಭಾರಿ ಪ್ರತಿಭಟನೆ ತೋರಿದಾಗ ಉದ್ರಿಕ್ತ ವಾತಾವರಣ ಉಂಟಾಗಿತ್ತು. 
 
ಆರೋಪಿ, ಬಿಜೆಪಿ ಮುಖಂಡನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಉಜ್ಜೈನಿಯ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್‌.ಪಿ.ರಘುವಂಶಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ