ಬಿಜೆಪಿ ನಾಯಕ ಗಿರಿರಾಜ್ ಸಿಂಗ್‌ಗೆ ನಿರೀಕ್ಷಣಾ ಜಾಮೀನು

ಶುಕ್ರವಾರ, 25 ಏಪ್ರಿಲ್ 2014 (12:31 IST)
ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕಾಗಿ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೇಲೆ ದಾಖಲಾಗಿದ್ದ 3 ಆರೋಪಗಳಲ್ಲಿ ಒಂದಕ್ಕೆ ನಗರದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. 
 
ಜನ ಪ್ರಾತಿನಿಧ್ಯ ಕಾನೂನು 1950, ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಕಾರ ಪಾಟ್ಣಾ ವಿಮಾನ ನಿಲ್ದಾಣ ಪೋಲಿಸ್ ಸ್ಟೇಷನ್ ಅಡಿಯಲ್ಲಿಏ ಪ್ರಿಲ್ 21 ರಂದು ಸಿಂಗ್ ಮೇಲೆ ದಾಖಲಾಗಿದ್ದ ಎಫ್ಐಆರ್ ಕುರಿತಂತೆ ಪರಿಶೀಲಿಸಿದ ಪಾಟ್ಣಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬೀರೇಂದ್ರ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರು.
 
ನಿತೀಶ್ ಕುಮಾರ್ ಸರಕಾರದಲ್ಲಿ ಮಾಜಿ ಮಂತ್ರಿಯಾಗಿದ್ದ ಸಿಂಗ್, ಕಳೆದ ಏಪ್ರಿಲ್ 19ರಂದು ಜಾರ್ಖಂಡ್‌ನ ದೇವಘರ್ ನಗರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ 'ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಬೇಕು' ಎಂದು ಹೇಳಿದ್ದರು. 
 
"ಸಿಂಗ್ ಸಕ್ಷಮ ಪ್ರಾಧಿಕಾರದ ನೋಟಿಸಿಗೆ ಮೋದಲೇ ಉತ್ತರ ನೀಡಿದ್ದಾರೆ. ಅವರ ಹೇಳಿಕೆ ವಿಶೇಷವಾಗಿ ಯಾವ ಜಾತಿ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿದ್ದಲ್ಲ" ಎಂದು ಸಿಂಗ್ ಪರ ವಕೀಲ ಜನಾರ್ಧನ್ ರಾಯ್ ವಾದ ಮಾಡಿದ್ದರು. 
 
ದ್ವೇಷಪೂರಿತ ಭಾಷಣಕ್ಕಾಗಿ ಸಿಂಗ್ ಮೇಲೆ ದೇವಘರ್, ಬೊಕಾರೋ ಮತ್ತು ಪಾಟ್ಣಾದಲ್ಲಿ ಕೇಸ್ ದಾಖಲಿಸಲಾಗಿತ್ತು. ಬೊಕಾರೋ ನ್ಯಾಯಾಲಯ ಸಿಂಗ್ ವಿರುದ್ಧ ಜಾಮೀನುರಹಿತ ವಾರಂಟ್‌ನ್ನು ಜಾರಿ ಮಾಡಿತ್ತು. 
 
ಆಗಿಂದ ಬೊಕಾರೋದ ಪೋಲಿಸರ ಒಂದು ದಳ ಅವರನ್ನು ಬಂಧಿಸಲು ಪಾಟ್ಣಾದಲ್ಲಿ ತಳವೂರಿದೆ. ಆದರೆ ಅವರ ಮನೆಯ ಮೇಲೆ ದಾಳಿ ಮಾಡಿರುವ ಪೋಲಿಸರಿಗೆ ಸಿಂಗ್ ಪತ್ತೆಯಾಗಿಲ್ಲ. 

ವೆಬ್ದುನಿಯಾವನ್ನು ಓದಿ