ದೆಹಲಿ ವಿಧಾನಸಭೆಯಲ್ಲಿ ಮೈಕ್ ಮುರಿದ ಬಿಜೆಪಿ ಶಾಸಕ

ಮಂಗಳವಾರ, 30 ಜೂನ್ 2015 (18:38 IST)
ದೆಹಲಿಯ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಮೈಕ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಬಿಜೆಪಿ ಶಾಸಕ ಅದನ್ನು ಮುರಿದು ಹಾಕಿದ ಘಟನೆ ವರದಿಯಾಗಿದೆ. 
 
ಬಿಜೆಪಿಯ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ, ಪ್ರಶ್ನೆಗಳನ್ನು ಕೇಳುವಾಗ ಅಥವಾ ಮಾತುಗಳನ್ನು ಆಲಿಸುವಾಗ ಮೈಕ್ ಬಂದ್ ಆಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ಒ.ಪಿ. ಶರ್ಮಾ ತಮ್ಮ ಡೆಸ್ಕ್‌ ಮೇಲಿದ್ದ ಮೈಕ್ ಮುರಿದು ಬಿಸಾಕಿದ ಘಟನೆ ವರದಿಯಾಗಿದೆ. 
 
ವಿಧಾನಸಭೆಯಲ್ಲಿ ನಾವು ಮಾತನಾಡುವಾಗ ಮೈಕ್ ಸದಾ ಬಂದ್ ಆಗಿರುತ್ತದೆ. ಇಂತಹ ಘಟನೆಗಳು ಸಹಿಸಲು ಸಾಧ್ಯವಿಲ್ಲ ಎಂದು ಗುಪ್ತಾ ಆಕ್ರೋಶ ವ್ಯಕ್ತಪಡಿಸಿದರು.
 
ಗುಪ್ತಾ ಅವರ ಹೇಳಿಕೆಯನ್ನು ಸಮರ್ಥಿಸಿದ ಶರ್ಮಾ ಡೆಸ್ಕ್ ಮೇಲಿದ್ದ ಮೈಕ್‌ನ್ನು ಮುರಿದು ಹಾಕಿದರು. 
 
ಸರಕಾರಿ ಆಸ್ತಿಯಾದ ಮೈಕ್ ಮುರಿದು ಹಾಕಿದ್ದರಿಂದ ಬಿಜೆಪಿ ಶಾಸಕ ಶರ್ಮಾ ಸದನದ ಕ್ಷಮೆ ಕೇಳಬೇಕು ಎಂದು ಆಪ್ ಶಾಸಕರು ಒತ್ತಾಯಿಸಿದರು.
 

ವೆಬ್ದುನಿಯಾವನ್ನು ಓದಿ