ಈ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಬೆಂಬರಿಗರನ್ನುದ್ದೇಶಿಸಿ ಈ ರೀತಿಯಾಗಿ ಹೇಳುತ್ತಿರುವುದು ಕಂಡು ಬಂದಿದೆ, “ ಅವರು ಒಬ್ಬ ಹಿಂದೂ ಹುಡುಗಿಯನ್ನು ಮತಾಂತರಿಸಿದರೆ, ನಾವು 100 ಮುಸ್ಲಿಂ ಧರ್ಮೀಯ ಯುವತಿಯರ ಧರ್ಮ ಪರಿವರ್ತನೆ ಮಾಡುವ ಕುರಿತು ನಾವು ನಿರ್ಧರಿಸಿದ್ದೇವೆ".
ಆದರೆ ಈ ವಿಡಿಯೋದಲ್ಲಿ ದಿನಾಂಕ ಮುದ್ರಿತವಾಗಿಲ್ಲ.
ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಆದಿತ್ಯನಾಥ್ 'ಲವ್ ಜಿಹಾದ್' ಸಂಬಂಧಿಸಿದ ತನ್ನ ಹೇಳಿಕೆ ಅಧಿಕೃತವಲ್ಲ ಎಂದು ಹೇಳಿದ್ದು, ನಿರಾಧಾರದ ಸುದ್ದಿ ತೋರಿಸಲಾಗಿದೆ ಎಂದು ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.
ಆದಿತ್ಯನಾಥ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕೋಮುವಾದಿ ಹಿಂಸಾಚಾರ ಮಸೂದೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದ ಆಣತಿಯಂತೆ ವಿರೋಧ ಪಕ್ಷ ಕಾಂಗ್ರೆಸ್ ಈ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದರು.