ಸೀಟು ಹಂಚಿಕೆ ಕುರಿತ ನಿಲುವು ಬದಲಾಯಿಸಿ: ಉದ್ಧವ್‌ಗೆ ಶಾ ಕರೆ

ಸೋಮವಾರ, 22 ಸೆಪ್ಟಂಬರ್ 2014 (13:11 IST)
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತ ಅವರ ನಿಲುವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು. ಕಳೆದ 25 ವರ್ಷಗಳಿಂದ ಮೈತ್ರಿರಂಗದ ಪಾಲುದಾರರಾದ ಇವೆರಡು ಪಕ್ಷಗಳ ನಡುವೆ ಸೀಟು ಹೊಂದಾಣಿಕೆ ಕುರಿತಂತೆ ಬಿಕ್ಕಟ್ಟು ಉಂಟಾಗಿದೆ.
 
ಶಾ ಅವರು ಠಾಕ್ರೆಗೆ ಕರೆ ಮಾಡಿ, ಉಭಯ ಪಕ್ಷಗಳ ನಡುವೆ ಸಂಬಂಧ ಮುರಿಯಬಾರದು ಎಂದು ಹೇಳಿದರು.ಬಿಜೆಪಿ ತನಗೆ 135 ಸ್ಥಾನಗಳನ್ನು ನೀಡಬೇಕೆಂದು ಪಟ್ಟು ಹಿಡಿದಿರುವ ನಡುವೆ ಶಿವಸೇನೆ 288 ಸದಸ್ಯಬಲದ ವಿಧಾನಸಭೆಯಲ್ಲಿ 199 ಸೀಟುಗಳಿಂದ ಹೆಚ್ಚಿಗೆ ನೀಡಲು ಒಪ್ಪುತ್ತಿಲ್ಲ.

ಆದರೆ ಅಕ್ಟೋಬರ್ 15ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ  ಸೆಪ್ಟೆಂಬರ್ 25ಕ್ಕೆ ಮುಂಚೆ ಚಾಲನೆ ಸಿಗುವ ನಿರೀಕ್ಷೆಯಿಲ್ಲ.ಏಕೆಂದರ್ ಪಿತೃ ಪಕ್ಷವಿರುವುದರಿಂದ ಉಭಯ ಪಕ್ಷಗಳು ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇನ್ನೂ 72 ಗಂಟೆಗಳ ಕಾಲ ಕಾಯುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ