ಆಗಸ್ಟ್ 12 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಅಮಿತ್ ಶಾ

ಗುರುವಾರ, 30 ಜುಲೈ 2015 (19:11 IST)
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ 12 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ರಾಹುಲ್ ಸಿನ್ಹಾ ಹೇಳಿದ್ದಾರೆ.
 
ಅಮಿತ್ ಶಾ ಆಗಸ್ಟ್ 12 ರಂದು ನಗರಕ್ಕೆ ಆಗಮಿಸಲಿದ್ದು ಚೇಂಬರ್ ಆಫ್ ಕಾಮರ್ಸ್ ಸಬೆಯಲ್ಲಿ ಪಾಲ್ಗೊಳ್ಳುವುದಲ್ಲದೇ ಬುಕ್ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಪಕ್ಷದ ಕಾರ್ಯಕ್ರಮ ಕೂಡಾ ಆಯೋಜಿಸಲು ನಿರ್ಥರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಕಳೆದ ಜುಲೈ ತಿಂಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಮಹಾ ಸಂಪರ್ಕ ಅಭಿಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾ ಇದೀಗ ಎರಡನೇ ಬಾರಿಗೆ ಕೋಲ್ಕತಾ ನಗರಕ್ಕೆ ಭೇಟಿ ನೀಡುತ್ತಿದ್ದಾರೆ.
 
ಬಿಜೆಪಿ ನಾಯಕರ ಪ್ರಕಾರ, ಬಂಗಾಳದ ಪಕ್ಷದ ಉಸ್ತುವಾರಿ ಹೊತ್ತಿರುವ ಕೈಲಾಶ್ ವಿಜಯವರ್ಗಿಯ ಮತ್ತು ಸಿದ್ಧಾರ್ಥನಾಥ್ ಕೂಡಾ ಆಗಸ್ಟ್ ಮೊದಲ ವಾರದಲ್ಲಿ ಕೋಲ್ಕತಾಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ