ಗುಜರಾತ್ ದಂಗೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಕ್ಷಮೆಯಾಚಿಸಲಿ: ಬಿಜೆಪಿ

ಶುಕ್ರವಾರ, 3 ಜುಲೈ 2015 (20:05 IST)
ಗುಜರಾತ್ ದಂಗೆಯ ವಿಷಯ ಸಂಪೂರ್ಣವಾಗಿ ಅಸಂಬದ್ಧ. ದಂಗೆಯ ವಿಷಯವನ್ನು ಬಳಸಿಕೊಂಡ ಕಾಂಗ್ರೆಸ್ ಪಕ್ಷ ರಾಜಕೀಯ ಬದುಕಿನ ಚೇತರಿಕೆಗಾಗಿ ಹೋರಾಟ ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾಣಿಕತೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಕೂಡಲೇ ಅವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
  
ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಎ.ಎಸ್.ದುಲತ್ ಹೇಳಿಕೆಯೊಂದನ್ನು ನೀಡಿ ನರೇಂದ್ರ ಮೋದಿ ವಾಜಪೇಯಿ ಸಲಹೆಗಳನ್ನು ಪಾಲಿಸಬೇಕಾಗಿತ್ತು. ಗುಜರಾತ್ ಘಟನೆಗಾಗಿ ಪ್ರಧಾನಿ ಮೋದಿ ದೇಶದ ಕ್ಷಮೆಯಾಚಿಸಬೇಕು ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  
 
ಗುಜರಾತ್ ಘಟನೆ ಬಗ್ಗೆ ಪ್ರತಿಯೊಂದು ನ್ಯಾಯಾಲಯ ತನಿಖೆ ನಡೆಸಿದೆ. ಆದರೆ ಮೋದಿಯವರ ಪಾತ್ರ ಬಗ್ಗೆ ಸಾಬೀತಾಗಿಲ್ಲ. ಮೋದಿ ಸರಕಾರ ಉತ್ತಮವಾಗಿ ಅಡಳಿತ ನಡೆಸುತ್ತಿರುವುದರಿಂದ ವಿಪಕ್ಷಗಳಿಗೆ ಯಾವುದೇ ವಿಷಯ ಆರೋಪಿಸಲು ಸಿಗುತ್ತಿಲ್ಲ. ಆದ್ದರಿಂದ ಗುಜರಾತ್ ಘಟನೆಯ ವಿಷಯ ಕಾಂಗ್ರೆಸ್ ಎತ್ತಿಕೊಂಡಿವೆ ಎಂದು ಬಿಜೆಪಿ ಲೇವಡಿ ಮಾಡಿದೆ.
 
ಕಳೆದ 13 ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಇಂದು ಪ್ರಸ್ತಾಪಿಸುವುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಕಾಂಗ್ರೆಸ್ ಪಕ್ಷ ಯತ್ನಿಸಿ ವಿಫಲವಾಗಿದೆ. ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೆ ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಿವೆ. ಆದಾಗ್ಯೂ ಮೋದಿ ಪಾತ್ರವಿರುವ ಬಗ್ಗೆ ಸಾಕ್ಷ್ಯಗಳು ಲಭಿಸಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ. 

ವೆಬ್ದುನಿಯಾವನ್ನು ಓದಿ