ಮೋದಿಯನ್ನು ಟೀಕಿಸಿದ ಶಿವಸೇನೆ ಮುಖಂಡ ಸಂಜಯ್‌ ರಾವತ್‌

ಸೋಮವಾರ, 28 ಜುಲೈ 2014 (17:08 IST)
ಎನ್‌ಡಿಎ ಮೈತ್ರಿಕೂಟದ ಮಿತ್ರ ಪಕ್ಷವಾದ ಶಿವಸೇನೆ ಮುಖಂಡರ ಹೇಳಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನೋವುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.
 
 ಕೆಲ ದಿನಗಳ ಹಿಂದೆ ಶಿವಸೇನೆಯ ವಕ್ತಾರ ಸಂಜಯ್‌ ರಾವತ್‌ ಸೀರೆ ಮತ್ತು ಶಾಲ್‌ನ ರಾಜಕಾರಣ ನಡೆಯುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದರು. ತಮ್ಮ ತಾಯಿಯನ್ನು ಗುರಿಯಾಗಿಸಿಕೊಂಡು ಇಂತಹ ಹೇಳಿಕೆ ನೀಡಲಾಗಿದೆ ಎಂದು ಮೋದಿ ತಮ್ಮ ಅಸಮಾಧಾನವನ್ನು ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆಗೆ ರವಾನಿಸಿದ್ದಾರೆ. 
 
ಮೋದಿಯ ಪ್ರಮಾಣ ವಚನ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್‌ ಶರೀಫ್‌ರನ್ನು ಆಮಂತ್ರಿಸಲಾಗಿತ್ತು. ನರೇಂದ್ರ ಮೋದಿ ಪಾಕ್ ಪ್ರಧಾನಿ ಷರೀಪ್ ಅವರ ತಾಯಿಗೆ ಶಾಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದರೆ, ನವಾಜ್, ಮೋದಿಯವರ ತಾಯಿಗೆ ಸೀರೆಗಳನ್ನು ಉಡುಗೊರೆಯಾಗಿ ಕಳುಹಿಸಿರುವುದನ್ನು ಸ್ಮರಿಸಬಹುದು. 
 
ಅಖನೂರ್ ಸೆಕ್ಟರ್‌‌ನಲ್ಲಿ ಗಡಿಯ ಮೇಲೆ ಪಾಕಿಸ್ತಾನದ ಸೈನಿಕರು ಭಾರತೀಯ ಸೇನೆಯ ಸೈನಿಕರಿಗೆ ಕೊಂದಿದ್ದಾರೆ. ಶಾಲು ಮತ್ತು ಸೀರೆಯ ಕುಹಕ ನೀತಿ ಯಾಕೆ ? ಪಾಕಿಸ್ತಾನದಿಂದ ಯಾವುದೇ ಮಾತುಕತೆ ಆಗಬಾರದು. ಸೈನಿಕನ ಸಾವಿನ ಕಾರಣ ಪಾಕ್‌ ಉತ್ತರ ನೀಡಬೇಕಾಗುತ್ತದೆ ಎನ್ನುವ ರಾವತ್‌ರ ಹೇಳಿಕೆ ಮೋದಿಗೆ ಮುಜುಗರ ಉಂಟುಮಾಡಿತ್ತು.
 
ನರೇಂದ್ರ ಮೋದಿ, ಉಧ್ಬವ ಠಾಕ್ರೆಗೆ ಕಳುಹಿಸಿದ ಸಂದೇಶದಲ್ಲಿ ವಿಪಕ್ಷಗಳು ಕೂಡ ಈ ತರಹದ ಟೀಕೆ ಮಾಡಿಲ್ಲ ತಾಯಿ ಕುರಿತು ವೈಯಕ್ತಿಕ ವಿಷಯದ ಕುರಿತು ಟೀಕೆ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದರು.ಆದರೆ. ಸಂಜಯ್‌ ರಾವತ್‌ ಮೋದಿ ಉತ್ತರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ