ಮಕ್ಕಳ ಕಳ್ಳಸಾಗಾಣಿಕೆ ಆರೋಪ; ಬಿಜೆಪಿ ನಾಯಕಿ ಬಂಧನ

ಬುಧವಾರ, 1 ಮಾರ್ಚ್ 2017 (12:46 IST)
ಮಕ್ಕಳ ಕಳ್ಳಸಾಗಾಣಿಕೆ ಆರೋಪಡದಡಿಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ನಾಯಕಿ ಜೂಹಿ ಚೌಧರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 

ನೇಪಾಳ ಗಡಿಗೆ ಹೊಂದಿಕೊಂಡಿರುವ ಬತಾಶಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ. 
 
ಬಿಮಲಾ ಶಿಶುಗೃಹ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಚಂದನಾ ಚಕ್ರವರ್ತಿ ಅವರನ್ನು ಫೆಬ್ರವರಿ 18 ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಆ ಸಂದರ್ಭದಲ್ಲಿ ಚಂದನಾ ಜೂಹಿ ಅವರ ಬಗ್ಗೆ ಬಾಯ್ಬಿಟ್ಟಿದ್ದರು. ಮಕ್ಕಳ ಸಾಗಾಣಿಕೆ ದಂಧೆಯಲ್ಲಿ ಚಂದನಾ ಮತ್ತು ಜೂಹಿ ಸಹಭಾಗಿಗಳಾಗಿದ್ದಾರೆ. ಮಕ್ಕಳನ್ನು ದತ್ತು ನೀಡುವ ನೆಪದಲ್ಲಿ ದಂಧೆಯನ್ನು ನಡೆಸುತ್ತಿದ್ದರು. ಇವರ ತಂಡ ಸುಮಾರು 25ಕ್ಕೂ ಹೆಚ್ಚು ಮಕ್ಕಳನ್ನು ಭಾರತ ಮಾತ್ರವಲ್ಲದೇ, ಹೊರದೇಶಗಳಿಗೂ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ.
 
ಜೂಹಿ ಬಂಧನಕ್ಕೆ ತೃಣಮೂಲ ಕಾಂಗ್ರೆಸ್ ಯುವಘಟಕ ಮತ್ತು ವಿಧ್ಯಾರ್ಥಿ ಸಂಘಟನೆ ಅನೇಕ ದಿನಗಳಿಂದ ಪ್ರತಿಭಟನೆ ನಡೆಸಿತ್ತು.
 
ಜೂಹಿ ತಂದೆ ರವೀಂದ್ರನಾಥ ಚೌಧರಿ ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ.
 
ವಿಚಾರಣೆ ಸಂದರ್ಭದಲ್ಲಿ ಚಂದನಾ ಜೂಹಿ ಮಾತ್ರವಲ್ಲದೆ, ಬಿಜೆಪಿಯ ಮತ್ತೊಬ್ಬ ನಾಯಕಿ ರೂಪಾ ಗಂಗೂಲಿ , ಕೈಲಾಶ್ ವಿಜಯವರ್ಗಿಯ ಹೆಸರನ್ನು ಸಹ ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಇದೆ.
 

ವೆಬ್ದುನಿಯಾವನ್ನು ಓದಿ