ಪ್ರತಿಧ್ವನಿಸಿದ ಕಪ್ಪುಹಣ: ಎಲ್ಲಾ ಹೆಸರು ಬಹಿರಂಗ ಮಾಡುವಂತೆ ಆಗ್ರಹ

ಬುಧವಾರ, 26 ನವೆಂಬರ್ 2014 (17:04 IST)
ಕಪ್ಪು ಹಣದ ವಿಚಾರವಾಗಿ ಲೋಕಸಭೆಯ ಮೊದಲ ದಿನದ ಕಲಾಪವನ್ನು ನುಂಗಿಹಾಕಿದ ಬಳಿಕ, ಬುಧವಾರ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಕಪ್ಪುಹಣದ ವಿಚಾರವನ್ನು ಎತ್ತಿಕೊಳ್ಳಲಾಯಿತು. ಈ ವಿಚಾರವಾಗಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಪಕ್ಷದ ಮುಖಂಡ ಆನಂದ್ ಶರ್ಮಾ ಚುನಾವಣೆಗೆ ಮುಂಚೆ ಮೋದಿ ಸರ್ಕಾರ ದೇಶದ ಬಜೆಟ್‌ನ 5 ಪಟ್ಟು ಕಪ್ಪು ಹಣ ವಾಪಸು ತರುವುದಾಗಿ ಹೇಳಿದ್ದರು.

ಸರಕಾರದ ಬದಲಾವಣೆಯಿಂದ ಮ್ಯಾಜಿಕ್ ತಿರುವು ಸಿಗುತ್ತದೆ ಎಂದು ಜನರನ್ನು ನಂಬಿಸಲಾಯಿತು. ಬಿಜೆಪಿಯ ಉದ್ದೇಶ ಯುಪಿಎ ಸರ್ಕಾರಕ್ಕೆ ಕಳಂಕ ತರುವುದಾಗಿತ್ತು. ವಿದೇಶಿ ಖಾತೆಗಳ ಬಗ್ಗೆ ಸರ್ಕಾರ ದತ್ತಾಂಶ ಒದಗಿಸಿ ಆ ಮಾಹಿತಿಯ ಮೇಲೆ ಕ್ರಮಕೈಗೊಳ್ಳಬೇಕು.

 ಕಪ್ಪು ಹಣದ ಬಗ್ಗೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಇದಕ್ಕೆ ಮುಂಚೆ ಆರೋಪಿಸಿತ್ತು ಎಂದು ರಾಜ್ಯಸಭೆಯಲ್ಲಿ ಶರ್ಮಾ ತಿಳಿಸಿದರು. ನಾವು ಉಭಯಸದನಗಳಲ್ಲಿ ಕಪ್ಪು ಹಣ ಚರ್ಚಿಸಲು ಸಿದ್ಧರಿದ್ದೇವೆ. ಆದರೆ ಅವರು ಹಂಗಾಮ ಸೃಷ್ಟಿಸಲು ನಿರ್ಧರಿಸಿದ್ದಾರೆ ಎಂದು ವೆಂಕಯ್ಯನಾಯ್ಡು ಸಮಜಾಯಿಷಿ ನೀಡಿದರು. 

 
 ಕಪ್ಪು ಹಣ ಖಾತೆದಾರರ ಪಟ್ಟಿಯನ್ನು ಬಹಿರಂಗ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಸುಮಾರು 50 ಕಪ್ಪು ಹಣ ಖಾತೆದಾರರ ಹೆಸರಿದೆಯೆಂದು ಸರ್ಕಾರ ಹೇಳಿದರೂ ಅವರನ್ನು ಬಹಿರಂಗಮಾಡುತ್ತಿಲ್ಲ ಎಂದು ಖರ್ಗೆ ಹೇಳಿದರು. ಕಪ್ಪು ಹಣವನ್ನು 100 ದಿನಗಳಲ್ಲಿ ವಾಪಸು ತರುವುದಾಗಿ ಭರವಸೆ ನೀಡಿದ್ದ ಸರ್ಕಾರ ವಿಫಲವಾಗಿದೆ ಎಂದು ಖರ್ಗೆ ಟೀಕಿಸಿದರು. 

ವೆಬ್ದುನಿಯಾವನ್ನು ಓದಿ