ಕಪ್ಪು ಹಣ: ಸಾರ್ವಜನಿಕರಿಂದ ಮಾಹಿತಿ ಆಹ್ವಾನಿಸಿದ ಎಸ್‌ಐಟಿ

ಗುರುವಾರ, 30 ಅಕ್ಟೋಬರ್ 2014 (14:53 IST)
ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಕಪ್ಪು ಹಣದ ತನಿಖೆಗೆ ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ದಳವು ಸಾರ್ವಜನಿಕರಿಂದ ಮಾಹಿತಿಯನ್ನು ಆಹ್ವಾನಿಸಿದೆ. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು ಮತ್ತು ನಿಯಂತ್ರಕರಿದ್ದು, ಯಾರೂ ಬೇಕಾದರೂ ಮಾಹಿತಿ ನೀಡಬಹುದಾಗ ಈಮೇಲ್  ಐಡಿಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳಿವೆ. 
 
ಕಪ್ಪು ಹಣದ ಬಗ್ಗೆ ಸಾರ್ವಜನಿಕರು ವಿಶ್ವಾಸಾರ್ಹ ಮಾಹಿತಿಯನ್ನು ನೀಡಬಹುದು. ನಾವು ಆ ಮಾಹಿತಿಯ ಬಗ್ಗೆ ತನಿಖೆ ಮಾಡುತ್ತೇವೆ. ಆದರೆ ನಮಗೆ ವಿಶ್ವಾಸಾರ್ಹ ದಾಖಲೆಗಳು ಮಾತ್ರ ಬೇಕು ಎಂದು ಎಸ್‌ಐಟಿ ಮೂಲಗಳು ಹೇಳಿವೆ. 
 
 ಮುಂದಿನ ಕೆಲವು ವಾರಗಳಲ್ಲಿ ವಿಶೇಷ ತನಿಖಾ ದಳ ಜಿನೀವಾದ ಎಚ್‌ಎಸ್‌ಬಿಸಿಯಲ್ಲಿ ಅಕ್ರಮ ಹಣವನ್ನು ಇಟ್ಟಿರುವ 220 ಭಾರತೀಯರ ಬಗ್ಗೆ ಕೋರ್ಟ್‌ಗೆ ವರದಿಯನ್ನು ಸಲ್ಲಿಸಲಿದೆ. 2011ರಲ್ಲಿ ಫ್ರಾನ್ಸ್ ಈ ಹೆಸರುಗಳನ್ನು ಬಹಿರಂಗಮಾಡಿತ್ತು. ಬ್ಯಾಂಕ್ ನೌಕರರೊಬ್ಬರು ಈ ಅಂಕಿಅಂಶಗಳನ್ನು ಕದ್ದು ಮಾಹಿತಿದಾರರಾಗಿದ್ದರು.

ಹಿರಿಯ ವಕೀಲ ಜೇಠ್ಮಲಾನಿ ಕಪ್ಪು ಹಣವನ್ನು ಪತ್ತೆಮಾಡುವ ಬಗ್ಗೆ ಅರ್ಜಿ ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ 2009ರಿಂದೀಚೆಗೆ ಕಪ್ಪು ಹಣ ಪತ್ತೆಹಚ್ಚುವ ಭಾರತದ ಪ್ರಯತ್ನಗಳ ಮೇಲೆ ನಿಗಾವಹಿಸಿದೆ. ಎಚ್‌ಬಿಎಸ್‌ಸಿ ಪಟ್ಟಿಯಲ್ಲದೇ ಜರ್ಮನಿಯ ಲಿಕ್‌ಸ್ಟಾನ್‌ಟೈನ್‌ನಲ್ಲಿರುವ 18 ಭಾರತೀಯರ ಖಾತೆದಾರರ ಪಟ್ಟಿಯನ್ನು ಜರ್ಮನಿ ಒದಗಿಸಿದೆ. 
 

ವೆಬ್ದುನಿಯಾವನ್ನು ಓದಿ