ಕಪ್ಪುಹಣ ತನಿಖೆಗೆ ಸಹಕಾರ ನೀಡಲು ಸ್ವಿಸ್ ಒಪ್ಪಿಗೆ

ಸೋಮವಾರ, 9 ಫೆಬ್ರವರಿ 2015 (10:51 IST)
ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಕೂಡಿಟ್ಟಿರುವ ಕಾಳಧನದ ತನಿಖೆ ಕುರಿತಂತೆ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ. 
 
ಕಪ್ಪುಹಣ ಖಾತೆದಾರರ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಈ ಹಿಂದೆ ಹೇಳಿದ್ದ ಸ್ವಿಸ್ ಈಗ ಈ ಕುರಿತು ಚರ್ಚಿಸಲು ಒಪ್ಪಿಕೊಂಡಿದೆ.
 
ದೇಶದಲ್ಲಿ ಕಪ್ಪುಹಣ ಹೊಂದಿದವರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಸರ್ಕಾರ ಮುಂದುವರಿಸಿದ್ದು, ಕಪ್ಪುಹಣ ಇರಿಸಿದ ಭಾರತೀಯರ ವೈಯಕ್ತಿಕ ಬ್ಯಾಂಕ್ ಖಾತೆಗಳ ಮಾಹಿತಿಯ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲು ಸ್ವಿಸ್ ಬ್ಯಾಂಕ್ ಹಾಗೂ ಸ್ವಿಟ್ಜರ್ ಲೆಂಡ್ ಪೂರ್ಣ ಸಹಕಾರ ನೀಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇತ್ತೀಚಿಗೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ