ಸ್ಥಳೀಯ ಪೋಲಿಸರ ನಿರ್ಲಕ್ಷ: 45 ಕೀಮೀ ಪ್ರಯಾಣಿಸಿ ಎಸ್‌ಪಿಗೆ ದೂರು ನೀಡಿದ ರೇಪ್ ಪೀಡಿತೆ

ಮಂಗಳವಾರ, 15 ಜುಲೈ 2014 (18:06 IST)
ತನ್ನ ಗಂಡನ ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾದ ಕಣ್ಣು ಕಾಣದ ಮಹಿಳೆಯೊಬ್ಬಳು, ತನ್ನ ಹಳ್ಳಿಯಲ್ಲಿನ ಪೋಲಿಸ್ ಠಾಣೆಯಲ್ಲಿನ ಪೋಲಿಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಫಿಲಿಬಿಟ್‌ನಲ್ಲಿರುವ ಪೋಲಿಸ್ ಮುಖ್ಯ ಕಚೇರಿಗೆ ಹೋಗಿ ಪೋಲಿಸ್ ಅಧೀಕ್ಷಕಿ ಸೋನಿಯಾ ಸಿಂಗ್ ಅವರನ್ನು ಭೇಟಿಯಾದ ಘಟನೆ ವರದಿಯಾಗಿದೆ. 

ಫಿಲಿಬಿಟ್‌ನ ಜಿಲ್ಲೆಯ ನಬಾಡಿಯಾ ಶಿವಪುರಿಯಾ ಗ್ರಾಮದವಳಾದ ಆಕೆ ತನ್ನ ಮೇಲಿನ ದೌರ್ಜನ್ಯದ ಕುರಿತು ದೂರು ಸಲ್ಲಿಸಲು ಬಿಸಲ್ಪುರ್  ಕೋಟ್ವಾಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸ ಹೋಗಿದ್ದಾಳೆ . ಆದರೆ ಆಕೆಯ ದೂರನ್ನು ನೋಂದಾಯಿಸಿಕೊಳ್ಳುವುದರ ಬದಲು ಆಕೆಯನ್ನೇ ಬೈಯ್ದ ಪೋಲಿಸರು ಆಕೆಗೆ ಯಾವ ರೀತಿಯ ಸಹಕಾರವನ್ನು ನೀಡಲಿಲ್ಲ. 
 
ಆಕೆಯ ಮೇಲೆ ಅತ್ಯಾಚಾರ ನಡೆದ ಸಮಯದಲ್ಲಿ  ಆಕೆಯ ಗಂಡ ಹಳ್ಳಿಯಲ್ಲಿ ನಡೆಯುತ್ತಿದ್ದ ಸತ್ಸಂಗ್ ಕೇಳಲು ಹೋಗಿದ್ದ . ಆಕೆ ಮನೆಯಲ್ಲಿ ಒಬ್ಬಳೇ ಇದ್ದುದನ್ನು ನೋಡಿದ ಆಕೆಯ ಪತಿಯ ಸ್ನೇಹಿತ ಆಕೆಯ ಮೇಲೆ ದಾಳಿ ಮಾಡಿ, ಬಾಯಿಯನ್ನು ಕಟ್ಟಿ ಅತ್ಯಾಚಾರ ಎಸಗಿದ್ದಾನೆ. ಆತನ ಧ್ವನಿಯಿಂದ ಯಾರಾತನೆಂದು ಗುರುತಿಸಿದ ಆಕೆ , ಅತ್ಯಾಚಾರ ಎಸಗಿದವನು ಬುರಿಯಾ ಗ್ರಾಮದ ನಿವಾಸಿ ಥಾನ್ ಸಿಂಗ್ ಎಂದು ಹೇಳಿದ್ದಾಳೆ. 
 
ಬಿಸಲ್ಪುರ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ರಾಜೇಂದ್ರ ಸಿಂಗ್‌ಗೆ ಕಠಿಣ ಎಚ್ಚರಿಕೆ ನೀಡಿರುವ ಎಸ್‌ಪಿ ಸೋನಿಯಾ ಸಿಂಗ್  ಈ ಪ್ರಕರಣವನ್ನು ಕೂಡಲೇ ದಾಖಲಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ರಾಜೇಂದ್ರ ಸಿಂಗ್‌ ಹೊಣೆಗೇಡಿತನಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಎಸ್‌ಪಿ  ಆರೋಪಿಯನ್ನು ಹಿಡಿಯಲು 24 ಗಂಟೆಗಳ ಸಮಯಾವಕಾಶವನ್ನು ನೀಡಿದ್ದಾರೆ. 
 
ಕಣ್ಣು ಕಾಣದ ಪೀಡಿತಳ ಕೇಸ್‌ನ್ನು ಸ್ಥಳೀಯ ಪೋಲಿಸರು ದಾಖಲಿಸಿಕೊಳ್ಳದ ಕಾರಣಕ್ಕೆ 45 ಕೀಮೀ ಪ್ರಯಾಣಿಸಿ ತಮ್ಮ ಬಳಿ ದೂರು ನೀಡಲು ಬಂದ ಪೀಡಿತಳ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಅವರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸದಿದ್ದರೆ ರಾಜೇಂದ್ರ ಸಿಂಗ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ