ಹುತಾತ್ಮ ಸೈನಿಕರ ಪಾರ್ಥಿವ ಶರೀರಗಳು ಇಂದು ರಾಜ್ಯಕ್ಕೆ?

ಸೋಮವಾರ, 15 ಫೆಬ್ರವರಿ 2016 (11:28 IST)
ಸಿಯಾಚಿನ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಹುತಾತ್ಮರಾದ ರಾಜ್ಯದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್‌ರ ಪಾರ್ಥಿವ ಶರೀರಗಳನ್ನು ಇಂದು ರಾಜ್ಯಕ್ಕೆ ತರಲಾಗುತ್ತಿದೆ. ಹುತಾತ್ಮರಾದ 9 ಯೋಧರ ಪಾರ್ಥಿವ ಶರೀರಗಳನ್ನು ಭಾನುವಾರ ಲೇಹ್‌ಗೆ ತರಲಾಗಿದ್ದು ಇಂದು ಅಂತಿಮ ಗೌರವ ಸಲ್ಲಿಸಿ ದೆಹಲಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಅವರರವರ ತವರಿಗೆ ದೇಹಗಳನ್ನು ಕಳುಹಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ. 

ರಾಷ್ಟ್ರ ರಾಜಧಾನಿಯಲ್ಲಿ ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಹುತಾತ್ಮ ವೀರಯೋಧರಿಗೆ ಅಂತಿಮ ನಮನಗಳನ್ನು ಸಲ್ಲಿಸಲಿದ್ದಾರೆ. 
 
ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಪುಣೆ, ಬೆಂಗಳೂರು, ಹೈದರಾಬಾದ್, ಮಧುರೈ, ಚೆನ್ನೈ ಹಾಗೂ ತಿರುವನಂತಪುರಂಗೆ ರವಾನಿಸಲಾಗುತ್ತದೆ. 
 
ಸಿಯಾಚಿನ್ ನಲ್ಲಿ ಫೆಬ್ರವರಿ 3 ರಂದು ಸಂಭವಿಸಿದ ಭೀಕರ ಹಿಮಪಾತದಲ್ಲಿ 9 ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಧಾರವಾಡದ ಯೋಧ ಹನುಮಂತಪ್ಪ ಕೊಪ್ಪದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.ಕಳೆದ ವಾರವೇ ಅವರ ಪಾರ್ಥಿವ ಶರೀರವನ್ನು ತವರಿಗೆ ತಂದು ಅಂತ್ಯಕ್ರಿಯೆ ನಡೆಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಉಳಿದ ಯೋಧರ ಪಾರ್ಥಿವ ಶರೀರಗಳನ್ನು ತರುವಲ್ಲಿ ವಿಳಂಬವಾಗಿದೆ.

ವೆಬ್ದುನಿಯಾವನ್ನು ಓದಿ