ವಿಮಾನದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ

ಶುಕ್ರವಾರ, 24 ಅಕ್ಟೋಬರ್ 2014 (11:42 IST)
ಅಹ್ಮದಾಬಾದ್‌ನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಫೋಟಿಸಲಾಗುತ್ತದೆಂದು ಅಪರಿಚಿತ ವ್ಯಕ್ತಿ ಈ ಮೇಲ್ ಮೂಲಕ  ಬೆದರಿಕೆ ಕರೆ ಮಾಡಿದ್ದು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸುತ್ತಿದೆ. ಕೇರಳದ ಕೊಚ್ಚಿ ಏರ್‌‍ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 
 
ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಕೊಚ್ಚಿ ವಿಮಾನನಿಲ್ದಾಣದ ಫ್ಲೈಟ್‌ಗಳಲ್ಲಿ ಬಾಂಬ್ ಸ್ಫೋಟಿಸುವ ಅಜ್ಞಾತ ಪತ್ರದ ಬೆದರಿಕೆ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿವೆ.

ಬಾಂಬ್ ಹೊಂದಿರುವ ಪ್ರಯಾಣಿಕನೊಬ್ಬ ಅಹ್ಮದಾಬಾದ್-ಕೊಚ್ಚಿ ಏರ್ ಇಂಡಿಯಾ ಫ್ಲೈಟ್‌ನಲ್ಲಿ ಹತ್ತಿದ್ದು, ಬಾಂಬ್ ಸ್ಫೋಟಿಸುತ್ತಾನೆಂಬ ಬೆದರಿಕೆ ಈ ಮೇಲ್ ಮೂಲಕ ತಲುಪಿತ್ತು. ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಬಹುಷಃ ಹುಸಿ ಬೆದರಿಕೆ ಕರೆ ಇರಬಹುದೆಂದು ಭಾವಿಸಲಾಗಿದೆ. 

ವೆಬ್ದುನಿಯಾವನ್ನು ಓದಿ