ವಿದೇಶಕ್ಕೆ ತೆರಳಲು ಸಲ್ಮಾನ್‌ಗೆ ಅನುಮತಿ ನೀಡಿದ ಕೋರ್ಟ್

ಮಂಗಳವಾರ, 26 ಮೇ 2015 (13:17 IST)
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದುಬೈಗೆ ತೆರಳಲು ಅನುಮತಿ ನೀಡುವಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾಡಿಕೊಂಡಿದ್ದ ಮನವಿಗೆ ಮುಂಬೈ ಹೈಕೋರ್ಟ್ ಅಸ್ತು ಎಂದಿದೆ. 

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಲುಗೆ ಜಾಮೀನು ನೀಡುವಾಗ ಕೋರ್ಟ್ ಹಲವು ನಿಭಂದನೆಗಳನ್ನು ವಿಧಿಸಿತ್ತು. ಅನುಮತಿ ಪಡೆಯದೇ ವಿದೇಶಕ್ಕೆ ತೆರಳುವಂತಿಲ್ಲ ಎಂದು ಆ ಸಂದರ್ಭದಲ್ಲಿ ಕೋರ್ಟ್‌  ತಾಕೀತು ಮಾಡಿತ್ತು. 
 
ಈ ಕಾರಣದಿಂದ ಸಲ್ಲು ತಮಗೆ ದುಬೈಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ಕಳೆದ ಬುಧವಾರ ಅರ್ಜಿ ಸಲ್ಲಿಸಿದ್ದರು. 
 
ದುಬೈನಲ್ಲಿ ಮೇ 29 ರಂದು ಮಾಧ್ಯಮವೊಂದು ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಸಲ್ಮಾನ್  ನೃತ್ಯ ಮಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ