ಯುಪಿಎ ಮತ್ತು ಬಿಜೆಪಿ ಎರಡೂ ಭೃಷ್ಟ ಪಕ್ಷಗಳು, ವ್ಯತ್ಯಾಸವಿಲ್ಲ: ಪ್ರಕಾಶ್ ಕಾರಟ್

ಗುರುವಾರ, 23 ಜುಲೈ 2015 (16:26 IST)
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಸಹ ಭೃಷ್ಟಾಚಾರದಲ್ಲಿ ತೊಡಗಿವೆ. ಆದರೆ ದುರದೃಷ್ಟವಶಾತ್ ಡಿಎಂಕೆ ಮತ್ತು ಎಐಡಿಎಂಕೆಗಳು ಬಿಜೆಪಿಯ ಭೃಷ್ಟಾಚಾರದ ಬಗ್ಗೆ ಧ್ವನಿ ಎತ್ತಲು ಸೋತಿವೆ ಎಂದು ಸಿಪಿಐಎಂ ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ. 
 
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿಗಳ ಮೇಲಿನ ಆರೋಪದ ಕುರಿತು ಯಾವ ರೀತಿಯಲ್ಲೂ ಪ್ರತಿಕ್ರಿಯಿಸದೆ ಮೌನವನ್ನು ಕಾಪಾಡಿಕೊಂಡಿರುವ ದ್ರಾವಿಡಿಯನ್ ಪಕ್ಷಗಳಿಗೆ ಅವರು ಪ್ರಶ್ನೆ ಎತ್ತಿದ್ದಾರೆ. 
 
"ಬಿಜೆಪಿ ಭೃಷ್ಟಾಚಾರ ಮುಕ್ತ ಆಡಳಿತವನ್ನು ನೀಡುವ ವಾಗ್ದಾನದೊಂದಿಗೆ ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡಿತು. ಆದರೆ ಅವರ 14 ತಿಂಗಳ  ಆಡಳಿತದಲ್ಲಿ ಅತಿಯಾದ ಭೃಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ", ಎಂದು ಅವರು ಆರೋಪಿಸಿದ್ದಾರೆ.
 
"ಕೇವಲ ಸಿಪಿಐ-ಎಂ ಮತ್ತು ಎಡಪಕ್ಷಗಳಷ್ಟೇ ಭೃಷ್ಟಾಚಾರದ ವಿರುದ್ಧ ದನಿ ಎತ್ತುತ್ತಿವೆ", ಎಂದು ಕಾರಟ್ ಹೇಳಿದ್ದಾರೆ. 
 
ಬಿಜೆಪಿ ಸರ್ಕಾರದ "ರೈತ ವಿರೋಧಿ ನೀತಿ" ಮತ್ತು ಭೃಷ್ಟಾಚಾರದ ವಿರುದ್ಧ ದೇಶಾದ್ಯಂತ ವಿರೋಧ ಪ್ರದರ್ಶನ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವುದಾಗಿ ಕಾರಟ್ ಎಚ್ಚರಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ