ಯುವಿ ಮನೆ ಗೇಟ್ ಬಿದ್ದು ಬಾಲಕ ಸಾವು

ಶನಿವಾರ, 23 ಏಪ್ರಿಲ್ 2016 (08:06 IST)
ಸ್ಪೋಟಕ ಬಾಟ್ಸ್‌ಮನ್ ಯುವರಾಜ್ ಸಿಂಗ್ ಅವರ ಮನೆಯ ಗೇಟ್ ಮೈಮೇಲೆ ಬಿದ್ದ ಪರಿಣಾಮ 8 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

 
ಘಟನೆ ನಡೆದಾಗ ನಿವಾಸದಲ್ಲಿ ಯಾರೂ ಇರಲಿಲ್ಲ. ಯುವರಾಜ್ ಸಿಂಗ್ ಮತ್ತು ಅವರ ತಾಯಿ  ಗುರುಗ್ರಾಮದ ಮತ್ತೊಂದು ಮನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. 
 
ಪ್ರಾಥಮಿಕ ವರದಿಗಳ ಪ್ರಕಾರ ಮನೆಯನ್ನು ನವೀಕರಣ ಮಾಡಲಾಗುತ್ತಿದ್ದು ಇತ್ತೀಚೆಗಷ್ಟೆ ಗೇಟನ್ನು ಅಳವಡಿಸಲಾಗಿತ್ತು.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ