ಹಿಮಾಚಲ ಪ್ರದೇಶದಲ್ಲೂ ಸೇತುವೆ ಕುಸಿತ(ವಿಡಿಯೋ)

ಶುಕ್ರವಾರ, 12 ಆಗಸ್ಟ್ 2016 (12:38 IST)
ಮಹಾರಾಷ್ಟ್ರದ ಮಹಾಡ್‌ನಲ್ಲಿ ಬ್ರಿಟಿಷ್ ಕಾಲದ ಹಳೆಯ ಸೇತುವೆ ಕುಸಿದ ಬೆನ್ನಲ್ಲೇ ಈಗ ಹಿಮಾಚಲದಲ್ಲೂ ಭಾರಿ ಮಳೆಯಿಂದಾಗಿ ಸೇತುವೆ ಕುಸಿದಿದೆ.

ಕಾಂಗ್ರಾ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದ್ದು ಸೇತುವೆ 44ವರ್ಷ ಹಳೆಯದು ಎಂದು ಹೇಳಲಾಗುತ್ತಿದೆ. ಅಬ್ಬರಿಸುತ್ತಿರುವ ಮಳೆಯಿಂದಾಗಿ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ.  
 
ಈ ಸೇತುವೆ ಹಿಮಾಚಲದ ನಾಗಪುರ ತೆಹ್ಸಿಲ್ ಮತ್ತು ಪಂಜಾಬ್‌ನ್ನು ಸಂಪರ್ಕಿಸುತ್ತದೆ. 
 
ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಿಗೆ ಅಲ್ಲಿಂದ ದೂರವಿರದಂತೆ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಆಗಸ್ಟ್ 2 ರಂದು ಮಹಾರಾಷ್ಟ್ರದ ಮಹಾಡ್‌ನಲ್ಲಿ ಬ್ರಿಟಿಷ್ ಕಾಲದ ಸೇತುವೆ ಕುಸಿದು ಎರಡು ಸರ್ಕಾರಿ ಬಸ್ ಮತ್ತು ಹಲವು ವಾಹನಗಳು ಕೊಚ್ಚಿ ಹೋಗಿದ್ದವು. ಘಟನೆಯಲ್ಲಿ 40ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು ಸುಮಾರು 26 ಜನ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆಯಷ್ಟೇ ಎರಡು ಬಸ್ ಅವಶೇಷಗಳು ಪತ್ತೆಯಾಗಿವೆ.
 
ಸೇತುವೆ ಕುಸಿಯುತ್ತಿರುವ ವಿಡಿಯೋ ನೋಡಿ
 

ವೆಬ್ದುನಿಯಾವನ್ನು ಓದಿ