ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಕಾನೂನು ಜಾರಿಗೆ ತನ್ನಿ:ತೊಗಾಡಿಯಾ

ಮಂಗಳವಾರ, 24 ನವೆಂಬರ್ 2015 (13:59 IST)
ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ತಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಮಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.     
 
ರಾಮಮಂದಿರ ಚಳುವಳಿಯಲ್ಲಿ ದಿವಂಗತ ನಾಯಕ ಅಶೋಕ್ ಸಿಂಘಾಲ್ ತಮ್ಮ ಜೀವನನ್ನೇ ಮುಡುಪಾಗಿರಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದಲ್ಲಿ ಅವರಿಗೆ ನಿಜವಾದ ಶೃದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಎಂದು ಸಿಂಘಾಲ್ ಸಂತಾಪ ಸೂಚಕ ಸಭೆಯಲ್ಲಿ ಹೇಳಿದ್ದಾರೆ.
 
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಮತ್ತು ರಾಜ್ಯಪಾಲ ಒ.ಪಿ.ಕೊಹ್ಲಿ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.
 
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್, ಸೋಮನಾಥ ದೇವಾಲಯ ನಿರ್ಮಾಣಕ್ಕಾಗಿ ಜನತೆಯ ಬಳಿ ಹೋಗಲಿಲ್ಲ. ಅಥವಾ ದೇವಾಲಯ ನಿರ್ಮಾಣಕ್ಕೆ ಕೋರ್ಟ್ ಆದೇಶಕ್ಕಾಗಿ ನಿರೀಕ್ಷಿಸಲಿಲ್ಲ. ಆದರೆ, ಸಂಸತ್ತಿನಲ್ಲಿ ಕಾನೂನು ಜಾರಿಗೊಳಿಸಿ ದೇವಾಲಯ ನಿರ್ಮಿಸಿದರು. ಅದರಂತೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. 
 
ಪ್ರಸ್ತುತ ರಾಮಮಂದಿರ ವಿವಾದ ಸುಪ್ರೀಂಕೋರ್ಟ್ ಮುಂದಿದೆ.
 

ವೆಬ್ದುನಿಯಾವನ್ನು ಓದಿ