ಹೇಳಿಕೆಗಳನ್ನು ನೀಡುವುದರಿಂದ ದಾವುದ್‌ನನ್ನು ಭಾರತಕ್ಕೆ ಕರೆತರಲು ಸಾಧ್ಯವಿಲ್ಲ: ಜ್ಯೋತಿ

ಸೋಮವಾರ, 6 ಜುಲೈ 2015 (20:22 IST)
ಭೂಗತ ದೊರೆ ದಾವುದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತರುವುದು ಮಾಡತಕ್ಕ ಕಾರ್ಯವಾಗಿದೆಯೇ ಹೊರತು ಕೇವಲ ಮಾತನಾಡುವುದರಿಂದ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಹೇಳಿದ್ದಾರೆ.  
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವುದ್‌ನನ್ನು ಭಾರತಕ್ಕೆ ತರಬೇಕು ಎಂದು ಕೇಂದ್ರ ಸರಕಾರ ಬಯಸಿದೆ. ಆದರೆ ಚೋಟಾ ಶಕೀಲ್ ನಾವು ಭಾರತಕ್ಕೆ ವಾಪಸ್ ಆಗಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. 
 
ದಾವುದ್ ಬಂಧನ ಕಾರ್ಯರೂಪಕ್ಕೆ ತರುವಂತಹ ವಿಷಯವಾಗಿದೆಯೇ ಹೊರತು ಕೇವಲ ಹೇಳಿಕೆಗಳನ್ನು ನೀಡುವುದರಿಂದ ಸಾಧ್ಯವಾಗುವುದಿಲ್ಲ. ಗಮನಾರ್ಹ ವಿಷಯವೆಂದರೆ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಪ್ರಕಾರ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯಾಗಿದ್ದ ದಾವುದ್ ಭಾರತಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದ. ಆದರೆ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಆತನ ಬೇಡಿಕೆಯನ್ನು ತಿರಸ್ಕರಿಸಿದರು    
 
ಏತನ್ಮಧ್ಯೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ದಾವುದ್ ಷರತ್ತುಗಳನ್ನು ವಿಧಿಸಿದ್ದರಿಂದ ಆತನ ಬೇಡಿಕೆಯನ್ನು ತಿರಸ್ಕರಿಸಲಾಯಿತು ಎಂದು ವಿವರಣೆ ನೀಡಿದ್ದಾರೆ.
 
ಭಾರತಕ್ಕೆ ಮರಳಲು ಸಿದ್ದನಿದ್ದೇನೆ. ಆದರೆ ನನ್ನನ್ನು ಜೈಲಿನಲ್ಲಿಡಬಾರದು ಮನೆಯಲ್ಲಿ ಗೃಹಬಂಧಿಯಾಗಿಸಬೇಕು ಎಂದು ದಾವುಡ್ ಇಬ್ರಾಹಿಂ ಮಹಾರಾಷ್ಟ್ರ ಸರಕಾರಕ್ಕೆ ಷರತ್ತು ವಿಧಿಸಿದ್ದ. ಆದರೆ, ಅಂದಿನ ಮುಖ್ಯಮಂತ್ರಿ ಶರದ್ ಪವಾರ್ ಕಾನೂನಿನ ಪ್ರಕಾರ ನಡೆಯಬೇಕು ಎಂದು ಹೇಳಿ, ದಾವುದ್ ಬೇಡಿಕೆಯನ್ನು ತಿರಸ್ಕರಿಸಿದ್ದರು. 
 

ವೆಬ್ದುನಿಯಾವನ್ನು ಓದಿ