ಭಾರತದಲ್ಲಿನ ಬಡತನದಿಂದ ಮನಮೊಂದು ಆತ್ಮಹತ್ಯೆಗೆ ಶರಣಾದ ಬ್ರಿಟನ್ ದಂಪತಿಗಳು

ಶುಕ್ರವಾರ, 24 ಅಕ್ಟೋಬರ್ 2014 (15:31 IST)
ಭಾರತದಲ್ಲಿರುವ ಬಡತನವನ್ನು ನೋಡಿ ಮನನೊಂದು ಬ್ರಿಟನ್ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ನೀಡಿರುವ ಹೇಳಿಕೆ ಹೊಸತೊಂದು ತಿರುವು ನೀಡಿದೆ.
 
ಬ್ರಿಟನ್ ದಂಪತಿಗಳು ಹೆಚ್ಚು ನಿದ್ರೆ ಮಾತ್ರೆ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ನೀಡಿರುವ ಹೇಳಿಕೆಯನ್ನು ಕುಟುಂಬದ ಸದಸ್ಯರು ಸ್ವೀಕರಿಸಲು ನಿರಾಕರಿಸಿದ್ದಾರೆ.  
 
ನಗರದ ತಾಜ್‌ಗಂಜ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಬ್ರಿಟನ್ ದಂಪತಿಗಳು ಸಾವನ್ನಪ್ಪಿದ್ದರು. ಕೋಣೆಯಲ್ಲಿ ನಿದ್ರೆಮಾತ್ರೆ ಮತ್ತು ಇತರ ಮಾತ್ರೆಗಳು ಪತ್ತೆಯಾಗಿರುವುದರಿಂದ ಹೆಚ್ಚು ಪ್ರಮಾಣದ ಡ್ರಗ್ಸ್‌ ಸೇವನೆ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಿದ ಪೊಲೀಸರು ಮೃತ ದೇಹಗಳನ್ನು ಪೋಸ್ಟ್‌ಮಾರ್ಟಂಗೆ ರವಾನಿಸಿದ್ದರು.
 
ಮೃತ ದಂಪತಿಗಳನ್ನು ಜೇಮ್ಸ್ ಗಾಸ್‌ಕೆಲ್ ಮತ್ತು ಅಲೆಕ್ಸಾಂಡ್ರಾ ನಿಕೋಲಾ ಗಾಸ್‌ಕೆಲ್ ಎಂದು ಗುರುತಿಸಲಾಗಿದ್ದು, ಯುಕೆ ಬರ್ಮಿಂಗ್‌ಹಾಮ್ ನಿವಾಸಿಹಗಳೆಂದು ಪೊಲೀಸರು ಗುರುತಿಸಿದ್ದಾರೆ.
 
ದಂಪತಿಗಳು ಜುಲೈ 11 ರಂದು ಭಾರತಕ್ಕೆ ಆಗಮಿಸಿದ್ದರು. ಆಕ್ಟೋಬರ್ 18 ರಂದು ಆಗ್ರಾ ನಗರಕ್ಕೆ ಆಗಮಿಸಿ ತಾಜ್‌ಗಂಜ್ ಪ್ರದೇಶದಲ್ಲಿರುವ ಮಾಯಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಲಬ್ ಮಾಥುರ್ ಪ್ರಕಾರ, ದಂಪತಿಗಳು ರಾತ್ರಿ ಊಟ ತರಿಸಿದ್ದರೂ ಅದನ್ನು ಸೇವಿಸದಿರುವುದನ್ನು ನೋಡಿದಲ್ಲಿ ಭೋಜನಕ್ಕೆ ಮುಂಚೆಯೇ ದಂಪತಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. 
 
ಬ್ರಿಟನ್ ಮೂಲದ ಮೃತ ದಂಪತಿಗಳ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ