ರೈತ ವಿರೋಧಿ ಭೂ ಸ್ವಾಧೀನ ಮಸೂದೆಗೆ ಬಿಎಸ್‌ಪಿ ಬೆಂಬಲ ನೀಡುವುದಿಲ್ಲ: ಮಾಯಾವತಿ

ಮಂಗಳವಾರ, 21 ಜುಲೈ 2015 (17:14 IST)
ರೈತ ವಿರೋಧಿ ಎಂಬ ಆರೋಪ ಹೊತ್ತಿರುವ ಭೂ ಸ್ವಾಧೀನ ಮಸೂದೆಯನ್ನು ಜಾರಿ ಮಾಡಲು ತಮ್ಮ ಪಕ್ಷ  ಬೆಂಬಲ ನೀಡಲಿದೆ ಎಂಬ ವರದಿಗಳನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ತಳ್ಳಿ ಹಾಕಿದ್ದಾರೆ. 
 
ಸೋಮವಾರ ಕೆಲವು ಸುದ್ದಿವಾಹಿನಿಗಳು ಭೂ ಸ್ವಾಧೀನ ಮಸೂದೆ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ತಮ್ಮ ಪಕ್ಷ  ಬೆಂಬಲ ನೀಡಲಿದೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಆದರೆ ನಾನದನ್ನು ತಳ್ಳಿ ಹಾಕುತ್ತೇನೆ.  ಈ ಮಸೂದೆ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಇದು ಉದ್ಯಮಪತಿಗಳ ಪರವಾದ ಮಸೂದೆ. ನಮ್ಮ ಪಕ್ಷ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
 
ಮುಂಗಾರು ಅಧಿವೇಶನಕ್ಕೂ ಒಂದು ದಿನ ಮೊದಲು (ಸೋಮವಾರ) ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದ ಪ್ರಧಾನಿ ಮೋದಿ ಭೂ ಸ್ವಾಧೀನ ಮಸೂದೆ ಪಾಸ್ ಮಾಡಲು ಸಹಕರಿಸಿ ಎಂದು ವಿನಂತಿಸಿಕೊಂಡಿದ್ದರು. 
 
ಲಲಿತ್ ಮೋದಿಗೆ ನೆರವು ನೀಡಿದ ಆರೋಪಗಳನ್ನೆದುರಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನ್ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ರಾಜೀನಾಮೆ ನೀಡಬೇಕೆಂದು ಮಾಯಾವತಿ ಆಗ್ರಹಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ