ಫೆಬ್ರವರಿ 23 ರಿಂದ ಬಜೆಟ್ ಅಧಿವೇಶನ

ಗುರುವಾರ, 4 ಫೆಬ್ರವರಿ 2016 (15:00 IST)
ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಬುಧವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿ ಸಂಸತ್ತಿನ ಬಜೆಟ್ ಅಧಿವೇಶನ ವೇಳಾಪಟ್ಟಿ ಕುರಿತು ಚರ್ಚಿಸಿದ್ದಾರೆ. 

ಸಂಸತ್ತಿನ ಬಜೆಟ್ ಅಧಿವೇಶನ ಫೆಬ್ರವರಿ 23 ರಂದು ಪ್ರಾರಂಭವಾಗಲಿದ್ದು, ಫೆಬ್ರವರಿ 25 ರಂದು ರೇಲ್ವೆ ಬಜೆಟ್ ಮಂಡನೆಯಾಗಲಿದ್ದು 26 ರಂದು ಆರ್ಥಿಕ ಸಮೀಕ್ಷೆ ನಡೆಯಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಫೆಬ್ರವರಿ 29 ರಂದು ಕೇಂದ್ರ ಬಜೆಟ್ 2016-17ನ್ನು ಪ್ರಸ್ತುತ ಪಡಿಸಲಿದ್ದಾರೆ. 
 
ಸಿಸಿಪಿಎ ಸಭೆ ಬಳಿಕ ವರದಿಗಾರರ ಜತೆ ಮಾತನಾಡುತ್ತಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಬಜೆಟ್‌ನ ಮೊದಲ ಹಂತ ಮಾರ್ಚ್ 16 ರಂದು ಮುಕ್ತಾಯಗೊಳ್ಳಲಿದ್ದು, ಎರಡನೆಯ ಹಂತ ಎಪ್ರಿಲ್ 25 ರಿಂದ ಮೇ 13ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. 
 
ಸಿಸಿಪಿಎ ಸಭೆ ಬಳಿಕ ಕೇಂದ್ರ ನಾಯ್ಡು ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರೊಟ್ಟಿಗೆ ಸಹ ಸಭೆ ನಡೆಯಿತು. 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನದ ಅವಧಿ ಕುರಿತು ಚರ್ಚಿಸಲು ಈ ಸಭೆಯನ್ನು ನಡೆಸಲಾಗಿತ್ತು. 

ವೆಬ್ದುನಿಯಾವನ್ನು ಓದಿ