ನಿತಿನ್ ಗಡ್ಕರಿ ಸಹೋದರಿಯ ಮನೆ ದರೋಡೆ: 80 ಕೆಜಿ ಚಿನ್ನ, ಎರಡು ಕೆಜಿ ಚಿನ್ನ ಕಳ್ಳತನ

ಶನಿವಾರ, 18 ಏಪ್ರಿಲ್ 2015 (18:08 IST)
ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹೋದರಿಯ ಮನೆಗೆ ನುಗ್ಗಿದ ಕಳ್ಳರು 81 ಕೆಜಿ ಚಿನ್ನ ಎರಡು ಕೆಜಿ ಬೆಳ್ಳಿ ಮತ್ತು 1 ಸಾವಿರ ಅಮೆರಿಕನ್ ಡಾಲರ್‌ ನೋಟುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗ್ಪುರ್‌ದ ಪಾಂಡೆ ಲೇಔಟ್‌ನಲ್ಲಿ ಸೋಲಾರ್ ವಿದ್ಯುತ್ ಕಂಪೆನಿಯ ಮಾಲೀಕ ಕಿಶೋರ್ ತೋಟಾಡೆಯವರನ್ನು ವಿವಾಹವಾಗಿರುವ ಗಡ್ಕರಿ ಸಹೋದರಿ ಮನೀಶಾ, ಒಟ್ಟು 23 ಲಕ್ಷ ರೂಪಾಯಿಗಳ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಕೆಲಸದ ನಿಮಿತ್ಯ ತೋಟಾಡೆ ಕೋಲ್ಕತಾಗೆ ತೆರಳಿದ್ದರು. ನಾಗ್ಪುರ್‌ಗೆ ಮರಳಿದ ಅವರನ್ನು ಕರೆ ತರಲು ಮನೀಶಾ ಮತ್ತು ಅವರ ಪುತ್ರ ಶಂತನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬರಲು ತೆರಳಿದ್ದರು. ಇದೇ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ 81 ಕೆಜಿ ಚಿನ್ನ ಎರಡು ಕೆಜಿ ಬೆಳ್ಳಿ ಮತ್ತು 1 ಸಾವಿರ ಅಮೆರಿಕನ್ ಡಾಲರ್‌ ನೋಟುಗಳೊಂದಿಗೆ ಪರಾರಿಯಾಗಿದ್ದಾರೆ

ಮನೀಶಾ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯಿಲ್ಲ ಮತ್ತು ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದಿರುವುದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎಂದು ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ನಿತಿನ್ ಗಡ್ಕರಿಯವರ ತವರು ಜಿಲ್ಲೆಯಾದ ನಾಗ್ಪುರ್‌ನಲ್ಲಿ ಇತ್ತೀಚೆಗೆ ಅಪರಾಧಗಳ ಹಾವಳಿ ಹೆಚ್ಚಾಗಿದೆ.

ಕಳೆದ ವಾರ ಸರಕಾರ  ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದ ಪೊಲೀಸ್ ಆಯುಕ್ತ ಕೆ.ಕೆ.ಪಾಠಕ್ ಮತ್ತು ಎಸ್‌ಪಿ ಯಾದವ್‌ರನ್ನು ಬದಲಾಯಿಸಿ ಆದೇಶ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ