ಉಗ್ರ ಬುರ್ಹಾನ್ ವನಿಯನ್ನು ಹತ್ಯೆ ಮಾಡಬಾರದಿತ್ತು: ಮೆಹಬೂಬಾ ಮುಫ್ತಿ

ಗುರುವಾರ, 28 ಜುಲೈ 2016 (19:55 IST)
ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿಯನ್ನು ಸೇನಾಪಡೆಗಳು ಹತ್ಯೆ ಮಾಡಬಾರದಿತ್ತು ಎಂದು ಜಮ್ಮು ಕಾಶ್ಮಿರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
 
ಒಂದು ವೇಳೆ, ಸೇನಾಪಡೆಗಳಿಗೆ ಅನಂತನಾಗ್ ಜಿಲ್ಲೆಯ ಕೊಕ್ರೆನಾಗ್‌ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಉಗ್ರ ಬುರ್ಹಾನ್ ವನಿ ಅಡಗಿದ್ದಾನೆ ಎನ್ನುವ ಮಾಹಿತಿ ಗೊತ್ತಿದ್ದ ನಂತರ ಆತನನ್ನು ಹತ್ಯೆಗೈಯದೆ ಬದುಕಲು ಅವಕಾಶ ಕೊಡಬೇಕಾಗಿತ್ತು ಎಂದು ನೀಡಿದ ಸಲಹೆ ರಾಜಕೀಯ ವಲಯದಲ್ಲಿ ಆಕ್ರೋಶ ಮೂಡಿಸಿದೆ.
 
ನಾನು ಪೊಲೀಸರು ಮತ್ತು ಸೇನಾಪಡೆಗಳಿಂದ ಮಾಹಿತಿ ಪಡೆದ ಪ್ರಕಾರ, ಮನೆಯೊದರಲ್ಲಿ ಮೂವರು ಉಗ್ರರು ಅಡಗಿದ್ದಾರೆ. ಆದರೆ, ಉಗ್ರರು ಯಾರು ಎನ್ನುವ ಬಗ್ಗೆ ಮಾಹಿತಿಯಿರಲಿಲ್ಲವೆಂದು ತಿಳಿಸಿದ್ದಾಗಿ ಹೇಳಿದ್ದಾರೆ.
 
ಕಳೆದ 2013ರಲ್ಲಿ ಸಂಸತ್ ದಾಳಿ ರೂವಾರಿ ಉಗ್ರ ಅಫ್ಜಲ್‌ ಗುರುನನ್ನು ಗಲ್ಲಿಗೇರಿಸಿದ ಪ್ರಕರಣ ಉದಾಹರಿಸಿದ ಅವರು, ಒಂದು ವೇಳೆ ಸರಕಾರಕ್ಕೆ ವನಿ ಎನ್‌ಕೌಂಟರ್ ಬಗ್ಗೆ ಮಾಹಿತಿಯಿದ್ದರೆ ಹೆಚ್ಚಿನ ಭದ್ರತೆಯ ವ್ಯವಸ್ಥೆ ಮಾಡಬಹುದಾಗಿತ್ತು ಎಂದರು.
 
ಅಫ್ಜಲ್‌ಗುರುನನ್ನು ಗಲ್ಲಿಗೇರಿಸಿದಾಗ ಅಂದಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಮಾಹಿತಿಯಿತ್ತು. ಆದ್ದರಿಂದ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ವನಿ ಎನ್‌ಕೌಂಟರ್ ಆದಾಗ ನಮಗೆ ಯಾವುದೇ ಮಾಹಿತಿಯಿರಲಿಲ್ಲ. ಆದಾಗ್ಯೂ ಕರ್ಫ್ಯೂ ಹೇರಿ ಪರಿಸ್ಥಿತಿ ನಿಭಾಯಿಸಬೇಕಾಗಿ ಬಂತು ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ