ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಿಯತಮೆಯ ನಗ್ನ ಪೋಟೋ ಪ್ರಕಟಿಸಿದ ಉದ್ಯಮಿಯ ಬಂಧನ

ಸೋಮವಾರ, 28 ಜುಲೈ 2014 (19:03 IST)
ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಉಡುಪು ವ್ಯಾಪಾರಿಯೊಬ್ಬ ತನ್ನ ಮಾಜಿ ಪ್ರಿಯತಮೆಯ ನಗ್ನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.

ವಿಪಿ ರಸ್ತೆಯ ಸಿಕ್ಕಾ ನಗರ್ ನಿವಾಸಿ 24 ವರ್ಷದ ನಿಶ್ಚಯ್ ಬನ್ಸಾಲ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು , ಆತನ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಮತ್ತು ಬೆದರಿಕೆ ಮತ್ತು ಮಹಿಳೆಯ ಮಾನಹಾನಿ ಮಾಡಿದ ಆರೋಪದ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆಯ ಉದ್ದೇಶದಿಂದ ಆತನ ಮೊಬೈಲ್‌ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.  
 
ಪೀಡಿತೆ ಮತ್ತು ಆರೋಪಿ ಒಂದೇ ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಒಬ್ಬರನೊಬ್ಬರು ಪರಷ್ಪರ ಪ್ರೀತಿಸುತ್ತಿದ್ದರು. ಆದರೆ ಎರಡು ಕುಟುಂಬಗಳಿಗೆ ಆ ಕುರಿತು ತಿಳಿದಿರಲಿಲ್ಲ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ. 
 
2011ರಲ್ಲಿ ಪೀಡಿತೆ  ಒಂದು ದಿನ ಮನೆಯಲ್ಲಿ ತಾನೊಬ್ಬಳೇ ಇದ್ದಾಗ ತನ್ನ ಮೊಬೈಲ್ ಪೋನ್‌ನಿಂದ ತನ್ನದೇ ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಳು. ಆದರೆ ಅದನ್ನವಳು ಯಾರ ಬಳಿಯೂ ಹಂಚಿಕೊಂಡಿರಲಿಲ್ಲ.  ಆದರೆ ಅವಳಿಗೆ ಅರಿವಿಲ್ಲದೇ ಆರೋಪಿ ಆ ಭಾವಚಿತ್ರಗಳನ್ನು ತನ್ನ ಮೊಬೈಲ್‌ಗೆ  ವರ್ಗಾಯಿಸಿಕೊಂಡಿದ್ದ. 
 
ನಂತರ ಒಂದು ದಿನ ಆರೋಪಿ ಆಕೆಗೆ ಆ ಭಾವಚಿತ್ರಗಳನ್ನು ತೋರಿಸಿದ. ಗಾಬರಿಗೊಂಡ ಆಕೆ ಅದನ್ನು ಅಳಿಸಿ ಹಾಕುವಂತೆ  ಕೇಳಿಕೊಂಡಿದ್ದಾಳೆ. ಈ ಕಾರಣಕ್ಕೆ ಇಬ್ಬರ ನಡುವೆ ವಿವಾದವಾಗಿ ಆಕೆ ತಮ್ಮ ನಡುವಿನ ಪ್ರೀತಿಗೆ ಮಂಗಳ ಹಾಡಿದ್ದಾಳೆ. ತನ್ನನ್ನು ಮರಳಿ ಸ್ವೀಕರಿಸುವಂತೆ ಆರೋಪಿ ಎಷ್ಟು ಕೇಳಿಕೊಂಡರು ಯುವತಿ ಅದಕ್ಕೆ ಸೊಪ್ಪು ಹಾಕಲಿಲ್ಲ. 
 
2013 ಅಕ್ಟೋಬರ್ ತಿಂಗಳಲ್ಲಿ ಆಕೆಯ ಕುಟುಂಬದವರು ಆಕೆಯ ಮದುವೆಗೆ ಸಿದ್ಧತೆ ನಡೆಸುತ್ತಿರುವುದನ್ನು ತಿಳಿದ ಆರೋಪಿ ಆಕೆಗೆ ಬೆದರಿಕೆ ಒಡ್ಡಿ ಮೊಬೈಲ್ ಸಂದೇಶ ಕಳುಹಿಸಿದ್ದಾನೆ. 
 
ನವೆಂಬರ್ 2013ರಲ್ಲಿ ಆಕೆಯ ಭಾವಿ ಪತಿಯನ್ನು ಭೇಟಿಯಾದ ಆರೋಪಿ ಆ ಪೋಟೋಗಳನ್ನು ಆತನಿಗೆ ತೋರಿಸಿ, ಆಕೆಯ ಜತೆ ತನಗೆ ಸಂಬಂಧವಿತ್ತು ಎಂದು ಹೇಳಿದ್ದಾನೆ. ಹೀಗಾಗಿ ಆಕೆಯ ಮದುವೆ ಮುರಿದು ಬಿದ್ದಿದೆ. ನೀನು ಬೇರೆಯವರನ್ನು ಮದುವೆಯಾಗಲು ನಾನು ಅವಕಾಶ ಕೊಡಲಾರೆ ಎಂದು ಆತ ಆಕೆಗೆ ಬೆದರಿಕೆ ಒಡ್ಡುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಉಪಟಳದ ಬಗ್ಗೆ ಪಾಲಕರಿಗೆ ತಿಳಿಸಿದ ಪೀಡಿತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. 

ವೆಬ್ದುನಿಯಾವನ್ನು ಓದಿ