ಸಹೋದರಿಯರ ಮೇಲೆ ರೇಪ್ ಮಾಡುವಂತೆ ಆದೇಶಿಸಿಲ್ಲ: ಉ.ಪ್ರ. ಗ್ರಾಮ ಪಂಚಾಯಿತಿ

ಗುರುವಾರ, 3 ಸೆಪ್ಟಂಬರ್ 2015 (22:01 IST)
ಮೇಲ್ಜಾತಿಯ ಮಹಿಳೆಯರೊಂದಿಗೆ ದಲಿತ ಸಹೋದರರು ಓಡಿಹೋಗಿದ್ದಾರೆ ಎನ್ನುವ ಕಾರಣಕ್ಕೆ ಅವರ ಕುಟುಂಬದ ದಲಿತ ಸಹೋದರಿಯರ ಮೇಲೆ ಅತ್ಯಾಚಾರವೆಸಗುವಂತೆ ಆದೇಶ ನೀಡಲಾಗಿದೆ ಎನ್ನುವ ಆರೋಪಗಳನ್ನು ಗ್ರಾಮ ಪಂಚಾಯಿತಿ ತಳ್ಳಿಹಾಕಿದೆ.  
 
ಭಾಗಪತ್ ಪ್ರಾಂತ್ಯದ ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ, ಇಂತಹ ಯಾವುದೇ ಆದೇಶ ಹೊರಡಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರು ದಲಿತ ಸಹೋದರಿಯರ ಕುಟುಂಬಗಳು ಕೂಡಾ ಅಂತಹ ಆದೇಶ ಹೊರಡಿಸಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಕೂಡಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
 
ಮಾಜಿ ಸೈನಿಕ ಮತ್ತು ಸಹೋದರಿಯರ ತಂದೆಯಾದ ಧರಮ್ ಪಾಲ್ ಸಿಂಗ್, ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಆದೇಶ ಹೊರಡಿಸಿಲ್ಲ ಎನ್ನುವುದು ಕೇಳಿದ್ದೇವೆ ಎಂದು ಹೇಳಿದ್ದಾರೆ.  
 
ಧರ್ಮಪಾಲ್ ಸಿಂಗ್ ಪುತ್ರ ಮೇಲ್ಜಾತಿಯ ವಿವಾಹಿತ ಮಹಿಳೆಯೊಂದಿಗೆ ಪ್ರೇಮ ಪಾಶದಲ್ಲಿ ಸಿಲುಕಿ ಪರಾರಿಯಾಗಿರುವುದು ಎರಡು ಕುಟುಂಬಗಳ ಕಲಹಕ್ಕೆ ಕಾರಣವಾಗಿದೆ. ಸಿಂಗ್ ಪರವಾಗಿ ವಕೀಲರೊಬ್ಬರು ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಿಸಿ ಇಬ್ಬರು ಸಹೋದರಿಯರ ರಕ್ಷಣೆಗಾಗಿ ಭದ್ರತೆ ನೀಡುವಂತೆ ಕೋರಿದ್ದಾರೆ.   
 
ಸಹೋದರರು ಮೇಲ್ಜಾತಿ ಮಹಿಳೆಯೊಂದಿಗೆ ಪರಾರಿಯಾಗಿದ್ದಕ್ಕಾಗಿ ದಂಡದ ರೂಪದಲ್ಲಿ ಅವರ ಸಹೋದರಿಯರಾದ ಮೀನಾಕ್ಷಿ ಕುಮಾರಿ ಮತ್ತು ಆಕೆಯ ಕಿರಿಯ ಸಹೋದರಿಯನ್ನು ಬೆತ್ತಲೆಗೊಳಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡಿಸಿ, ಮುಖಕ್ಕೆ ಕಪ್ಪು ಮಸಿ ಬಳೆದು ನಂತರ ರೇಪ್ ಮಾಡಲಾಗುವುದು ಎನ್ನುವ ಮಾಹಿತಿ ಗ್ರಾಮಸ್ಥರಿಂದ ತಿಳಿದ ಸಹೋದರಿಯರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ