ಶಿಖಾರಿಪುರದಲ್ಲಿ ರಂಗೇರಿದ ಚುನಾವಣಾ ಆಖಾಡ

ಗುರುವಾರ, 21 ಆಗಸ್ಟ್ 2014 (08:37 IST)
ರಾಜ್ಯದ 3 ಕಡೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ತಮ್ಮ ಮಗ ಬಿ.ವೈ ರಾಘವೇಂದ್ರ ಮತ್ತು ಕುಟುಂಬದ ಇತರ ಸದಸ್ಯರ ಸಮೇತ  ಸಮೇತರಾಗಿ ಬಂದು ಆಡಳಿತ ಸೌಧ ಮತಗಟ್ಟೆ ಸಂಖ್ಯೆ 132ರಲ್ಲಿ  ಮತ ಚಲಾಯಿಸಿದರು.
 
ಮಾಜಿ ಸಿಎಂ ಯಡಿಯೂರಪ್ಪರವರ ಪ್ರತಿಷ್ಠೆಯ ಕಣವಾಗಿರುವ ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ  ಅವರ ಪುತ್ರ ಬಿವೈ ರಾಘವೇಂದ್ರ ಮತ್ತು  ಕಾಂಗ್ರೆಸ್ಸಿನಿಂದ ಶಾಂತವೀರ ಗೌಡ ಆಖಾಡದಲ್ಲಿದ್ದಾರೆ. 
 
ಮತದಾನಕ್ಕೆ ಬರುವ ಮುನ್ನ ಎಂದಿನಂತೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದ ಮಾಜಿ ಸಿಎಂ ಮತ್ತು ಅವರ ಮಗ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿದವರಲ್ಲಿ ಮೊದಲಿಗರಾದರು. ಅವರಿಬ್ಬರು ಶೂ ಬಿಚ್ಚಿಟ್ಟು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
 
ಅವರು ಮತ ಚಲಾಯಿಸಿ ಹೋದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರ ಗೌಡ  ಅವರ ಕುಟುಂಬ ಕೂಡ  ಮತದಾನ ಚಲಾಯಿಸಿತು.
 
ಕ್ಷೇತ್ರದಲ್ಲಿ 228 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 32 ಸೂಕ್ಷ್ಮ ಮತ್ತು 21 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಭದ್ರತೆಗೆ 1,500 ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
 
ಶಿಕಾರಿಪುರ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 1,76,940. ಅದರಲ್ಲಿ ಮಹಿಳೆಯರ ಸಂಖ್ಯೆ 87,000 ಇದ್ದರೆ, ಪುರುಷ ಮತದಾರರ ಸಂಖ್ಯೆ 89,940. 
 
ಚಿಕ್ಕೋಡಿ-ಸದಲಗಾ ಕ್ಷೇತ್ರ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಮುಂಜಾನೆಯಿಂದ ಮತದಾನ ಪ್ರಾರಂಭವಾಗಿದೆ.

ವೆಬ್ದುನಿಯಾವನ್ನು ಓದಿ