ಪ್ರಧಾನಿ ಮೋದಿಗೆ ಸತ್ವಪರೀಕ್ಷೆ: 9 ರಾಜ್ಯಗಳಲ್ಲಿ ಉಪಚುನಾವಣೆ

ಬುಧವಾರ, 10 ಸೆಪ್ಟಂಬರ್ 2014 (15:27 IST)
ದೇಶದ ಒಂಬತ್ತು ರಾಜ್ಯಗಳಲ್ಲಿ ಸೆಪ್ಟೆಂಬರ್ 13 ರಂದು ಮೂರು ಲೋಕಸಭೆ ಮತ್ತು 33 ವಿಧಾನಸಭೆ ಕ್ಷೇತ್ರಗಳಿಗೆ ಉಪಜಚುನಾವಣೆ ನಡೆಯಲಿರುವುದರಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರಕ್ಕೆ ಇದೀಗ ಸತ್ವಪರೀಕ್ಷೆ ಎದುರಾಗಿದೆ. 
 
ವಡೋದರಾ ಮತ್ತು ಮೇನ್‌ಪುರಿ ಮತ್ತು ಮೇದಕ್ ಜಿಲ್ಲೆಗಳಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿದ್ದು, ಎರಡು ಲೋಕಸಭೆ ಕ್ಷೇತ್ರಗಳು ಗುಜರಾತ್ ಮತ್ತು ಉತ್ತರಪ್ರದೇಶಲ್ಲಿವೆ. 11 ವಿಧಾನಸಭೆ ಕ್ಷೇತ್ರಗಳು ಉತ್ತರಪ್ರದೇಶದಲ್ಲಿ , ಗುಜರಾತ್‌ನಲ್ಲಿ 9 ವಿಧಾನಸಭೆ ಕ್ಷೇತ್ರಗಳು, ರಾಜಸ್ಥಾನದಲ್ಲಿ ನಾಲ್ಕು, ಈಶಾನ್ಯ ರಾಜ್ಯಗಳಲ್ಲಿ ಐದು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.  
 
ಉತ್ತರಪ್ರದೇಶದಲ್ಲಿ ಸಹರಣ್‌ಪುರ್ ನಗರ, ನೋಯಿಡಾ, ಠಾಕೂರ್‌ದ್ವಾರಾ, ಬಿಜನೋರ್, ನಿಘಾಸನ್, ಬಲ್ಹಾ, ಸಿರತು, ರೋಹಾನಿಯಾ, ಹಮೀರ್‌ಪುರ್, ಛಾರ್ಖರಿ ಮತ್ತು ಲಕ್ನೋ ಪೂರ್ವ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ.   
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ 80 ಲೋಕಸಭೆ ಕ್ಷೇತ್ರಗಳಲ್ಲಿ 71 ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಪಕ್ಷಕ್ಕೆ ತನ್ನ ಕ್ಷೇತ್ರಗಳನ್ನು ಉಳಿಸಕೊಳ್ಳುವ ಸವಾಲ್ ಎದುರಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿ ಸಂಸತ್ತಿಗೆ ಸ್ಪರ್ಧಿಸಿದ್ದರಿಂದ ಉಪಚುನಾವಣೆ ಎದುರಾಗಿದೆ.
 
 
 

ವೆಬ್ದುನಿಯಾವನ್ನು ಓದಿ