ಕೊನೆಗೂ ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ಪ್ರವೇಶಿಸಿದ ಬಿಜೆಪಿ

ಮಂಗಳವಾರ, 16 ಸೆಪ್ಟಂಬರ್ 2014 (14:29 IST)
ಬಸೀರತ್ ಕ್ಷೇತ್ರದಲ್ಲಿ ಗೆಲುವನ್ನು ದಾಖಲಿಸುವ ಮೂಲಕ, ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ಪ್ರವೇಶಿಸಲು  ಬಿಜೆಪಿ ಕೊನೆಗೂ ಯಶಸ್ವಿಯಾಗಿದೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ತೃಣಮೂಲ ಕಾಂಗ್ರೆಸ್ ಪಕ್ಷದ ದಿಪೆಂದು ಬಿಸ್ವಾಸ್‌ನನ್ನು ಸೋಲಿಸುವುದರ ಮೂಲಕ ಕೇಸರಿ ಪಕ್ಷದ ಸಮಿಕ್ ಭಟ್ಟಾಚಾರ್ಯ ಗೆಲುವನ್ನು ಸಾಧಿಸಿದ್ದಾರೆ. 
 
2011ರಲ್ಲಿ ಸಿಪಿಎಮ್‌ನ ನಾರಾಯಣ್ ಮುಖೋಪಧ್ಯಾಯ್ ಈ ಪ್ರದೇಶದಲ್ಲಿ ಜಯಶಾಲಿಯಾಗಿದ್ದರು. ಅವರ ಸಾವಿನಿಂದಾಗಿ  ಈ ಉಪಚುನಾವಣೆ ನಡೆದಿತ್ತು. 
 
ಪಶ್ಚಿಮ ಬಂಗಾಳದ  ಇನ್ನೊಂದು ಕ್ಷೇತ್ರ ಚೌರಂಘಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಯನಾ ಬಂಡ್ಯೋಪಧ್ಯಾಯ ಜಯವನ್ನು ದಾಖಲಿಸಿದ್ದಾರೆ. ಇವರು ತೃಣಮೂಲ ಕಾಂಗ್ರೆಸ್ ಪ್ರಮುಖ ನಾಯಕರಲ್ಲೊಬ್ಬರಾದ ಸುದೀಪ್ ಬಂಡ್ಯೋಪಧ್ಯಾಯ ಅವರ ಪತ್ನಿ. 
 
ಈ ಮೊದಲು ಸಹ ಇದೇ ಪಕ್ಷದ  ಸಿಖಾ ಮಿತ್ರಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ಮರು ಚುನಾವಣೆ ಘೋಷಿಸಲ್ಪಟ್ಟಿತ್ತು.

ವೆಬ್ದುನಿಯಾವನ್ನು ಓದಿ