ನಾಲ್ಕರ ಬಾಲಕನನ್ನು ನಾಯಿಯಿಂದ ರಕ್ಷಿಸಿದ ಬೆಕ್ಕು

ಬುಧವಾರ, 21 ಮೇ 2014 (13:15 IST)
ನಾಯಿಯ ದಾಳಿಯಿಂದ ಹುಡುಗನೊಬ್ಬನನ್ನು  ರಕ್ಷಿಸುವ ಬೆಕ್ಕೊಂದರ ವಿಡಿಯೋ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದ್ದು, ತಾರಾ ಎಂಬ ಹೆಸರಿನ ಕ್ಯಾಲಿಫೋರ್ನಿಯಾದ ಆ ಬೆಕ್ಕಿಗೆ ಎಷ್ಟು ಜನಮನ್ನಣೆ ಸಿಗುತ್ತಿದೆ ಎಂದರೆ, ಅಲ್ಲಿ ಆಯೋಜಿತವಾಗಿರುವ ಮೈನರ್ ಲೀಗ್ ಬೇಸ್ ಬಾಲ್ ಆಟದ ಮೊದಲ "ಥ್ರೋ" ವನ್ನು ಎಸೆದು ಪಂದ್ಯವನ್ನು ಉದ್ಘಾಟಿಸಲು ಆ ಬೆಕ್ಕನ್ನು ಆಹ್ವಾನಿಸಲಾಗಿದೆ, ಬೇಕರ್ಸ್‌ಫಿಲ್ಡ್ ಬ್ಲೇಜ್ ಅಧಿಕಾರಿಗಳು ತಿಳಿಸಿದ್ದಾರೆ.
 
ಬೇಕರ್ಸ್‌ಫಿಲ್ಡ್ ನಲ್ಲಿ ನಡೆದ ಒಂದು ಘಟನೆಯೊಂದನ್ನು ತೋರಿಸುವ ವಿಡಿಯೋದಲ್ಲಿ ತ್ರೈಸಿಕಲ್‌ನಲ್ಲಿ ಆಡುತ್ತಿದ್ದ 4 ವರ್ಷದ ಜೆರೆಮಿ ಎಂಬ ಬಾಲಕನನ್ನು ನಾಯಿಯೊಂದು ಎಳೆಯುತ್ತಿದ್ದು, ಅದನ್ನು ಕಂಡ ಆ ಹುಡುಗನ ಮನೆಯ ಸಾಕುಬೆಕ್ಕು ತಾರಾ ಓಡಿ ಬಂದು ನಾಯಿಯನ್ನು ಎದುರಿಸಿ, ಅದನ್ನು ಮಗುವಿನಿಂದ ದೂರ ಓಡಿಸಿಕೊಂಡು ಹೋಗಿ ಮತ್ತೆ ಆ ಬಾಲಕನ ಬಳಿ ಹಿಂತಿರುಗಿ ಬರುವುದನ್ನು ಕಾಣಬಹುದು. 
 
ಪುಣ್ಯಕ್ಕೆ ನನ್ನ ಮಗನಿಗೆ ಯಾವ ಅಪಾಯವಾಗಿಲ್ಲ. ಅವನು ಆರೋಗ್ಯವಾಗಿದ್ದಾನೆ ಎಂದು ಈ ಚಿತ್ರವನ್ನು ಪೋಸ್ಟ್ ಮಾಡಿರುವ ರೋಜರ್ ಟ್ರಿಯನ್ಟಫಿಲೊ ಹೇಳಿಕೊಂಡಿದ್ದಾರೆ.  
 
ಬೆಕ್ಕಿನ ಸಾಧನೆಯಿಂದ ಪುಳಕಿತಗೊಂಡಿರುವ ಸ್ಥಳೀಯ ಬೇಸ್‌ಬಾಲ್ ತಂಡ ತಮ್ಮ ಪಂದ್ಯಾವಳಿಯಲ್ಲಿ ಪ್ರಥಮ ಬಾಲ್ ಎಸೆಯಲು ಬೆಕ್ಕನ್ನು ಕಳುಹಿಸ ಬೇಕೆಂದು ರೋಜರ್ ಕುಟುಂಬಕ್ಕೆ ಕೇಳಿಕೊಂಡಿದೆ.  

ವೆಬ್ದುನಿಯಾವನ್ನು ಓದಿ