ನನ್ನನ್ನು ಮುಖರ್ಜಿ ಸರ್ ಎಂದು ಕರೆದಲ್ಲಿ ಸಂತಸವಾಗುತ್ತದೆ: ವಿದ್ಯಾರ್ಥಿಗಳಿಗೆ ಪ್ರಣಭ್ ಮುಖರ್ಜಿ

ಶುಕ್ರವಾರ, 4 ಸೆಪ್ಟಂಬರ್ 2015 (17:00 IST)
ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಮಕ್ಕಳೊಂದಿಗೆ ಸಂವಾದ ನಡೆಸಿದ್ದು ಒಂದು ವೇಳೆ ವಿದ್ಯಾರ್ಥಿಗಳು ನನಗೆ ಮುಖರ್ಜಿ ಸರ್ ಎಂದು ಕರೆದಲ್ಲಿ ನನಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.
 
ರಾಷ್ಟ್ರಪತಿ ಎಸ್ಟೇಟ್‌ ಬಳಿಯಿರುವ ಶಾಲೆಗೆ ಭೇಟಿ ನೀಡಿದ ಮುಖರ್ಜಿ, ಸುಮಾರು ಅರ್ಧ ಗಂಟೆ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಂತರ ನನ್ನ ಪಾಠದಿಂದ ನಿಮಗೆ ಬೋರಾಗಿದೆಯೇ ಎಂದು ಮಕ್ಕಳನ್ನು ಪ್ರಶ್ನಿಸಿದರು.
 
ನಾನು ರಾಷ್ಟ್ರಪತಿಯಾಗಿ ನಿಮ್ಮ ಬಳಿ ಬಂದು ಸಂವಾದ ನಡೆಸುತ್ತಿಲ್ಲ. ಬದಲಾಗಿ ಒಬ್ಬ ಶಿಕ್ಷಕನಾಗಿ ಬಂದಿದ್ದೇನೆ. ನೀವು ನನ್ನನ್ನು ಹೇಗೆ ಕರೆಯುತ್ತೀರಿ. ನೀವು ನನಗೆ ಮುಖರ್ಜಿ ಸರ್ ಎಂದು ಕರೆದಲ್ಲಿ ನನಗೆ ತುಂಬಾ ಸಂತಸವಾಗುತ್ತದೆ ಎಂದರು. 
 
ಮುಖರ್ಜಿ ತಮ್ಮ ಬಾಲ್ಯದಲ್ಲಿ ನಡೆದ ಘಟನೆಗಳು ಓದಲು ಪಟ್ಟ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಮಕ್ಕಳ ಮುಂದಿಟ್ಟರು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮುಖರ್ಜಿಯವರ ಮಾತುಗಳನ್ನು ಆಲಿಸಿದರು ಎಂದು ಮೂಲಗಳು ತಿಳಿಸಿವೆ. 
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಭಿನಂದಿಸಿದರು. ಸಮಾಜದಿಂದ ಶಿಕ್ಷಕ ವೃತ್ತಿಗೆ ಗೌರವ ಮತ್ತು ಪರಿಗಣನೆ ದೊರೆಯಬೇಕಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟರು.  

ವೆಬ್ದುನಿಯಾವನ್ನು ಓದಿ