ಕುಡಿಯಲು ಕೋಕೋಕೋಲಾ ನೀಡದಿದ್ದುದಕ್ಕೆ ವ್ಯಕ್ತಿಯನ್ನು ಕೊಂದ ಒಂಟೆ

ಶುಕ್ರವಾರ, 17 ಅಕ್ಟೋಬರ್ 2014 (16:17 IST)
ಪ್ರತಿದಿನ ನೀಡುತ್ತಿದ್ದ ಪಾನೀಯವೊಂದನ್ನು ನೀಡದಿದ್ದುದಕ್ಕೆ ಕೋಪಗೊಂಡ ವನ್ಯಜೀವಿ ಉದ್ಯಾನದ ಒಂಟೆಯೊಂದು ವ್ಯಕ್ತಿಯೊಬ್ಬನನ್ನು ಕೊಂದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಶಾಂತ ಸ್ವಭಾವದ ಆ ಪ್ರಾಣಿ ಏಕಾಯೇಕಿ ಹುಚ್ಚೆದ್ದು ಕುಣಿದು ಮೂಲತಃ ಅಮೇರಿಕನ್ ಆಗಿರುವ ಅಭಯಾರಣ್ಯದ ಮಾಲೀಕ  ರಿಚರ್ಡ್ ಮಿಲೆಸ್ಕಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದುದಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. 
 
ತೆಲುಮ್ ರೆಸಾರ್ಟ್‌‌ನಲ್ಲಿ ನಡೆದ ಘಟನೆಯಲ್ಲಿ ಮೊದಲು ಮಿಲೆಸ್ಕಿಗೆ ಒದ್ದ  ಒಂಟೆ ನಂತರ ಅವನಿಗೆ ಕಚ್ಚಿತಲ್ಲದೇ ಆತನ ಮೈಮೇಲೆ ಕುಳಿತುಕೊಂಡಿತು. 
 
ಚಿಕಾಗೋ ಮೂಲದ ಪೀಡಿತನ ಮೇಲೆ ಕುಳಿತಿದ್ದ ಒಂಟೆಯನ್ನು ಎಳೆಯಲು ಪಿಕ್ - ಅಪ್ ಟ್ರಕ್ ಹಗ್ಗ ಕಟ್ಟಿ ಬಳಸಬೇಕಾಯಿತು. 
 
 ಒಂಟೆ ಆತನನ್ನು ಒದ್ದು ಕಚ್ಚಿದ್ದಾಗಲೇ ಆತ ಅರೆ ಜೀವವಾಗಿದ್ದ.ನಂತರ ಅದು ಆತನ ಮೇಲೆ ಕುಳಿತುಕೊಂಡಿತು.
 
ಮೊದಲೇ ಅದರ ದಾಳಿಯಿಂದ ಸಂಪೂರ್ಣ ಅರೇಜೀವವಾಗಿದ್ದ ಪೀಡಿತ ಪ್ರಾಣಿ ತನ್ನ ಮೈಮೇಲೆ ಕುಳಿತಾಗ ಉಸಿರುಗಟ್ಟಿ ಸತ್ತೇ ಹೋದ ಎಂದು  ನಾಗರಿಕ ರಕ್ಷಣಾ ಅಧಿಕಾರಿ ಆಲ್ಬರ್ಟೊ ಕ್ಯಾಂಟೊ ತಿಳಿಸಿದ್ದಾರೆ. 
 
ಪ್ರತಿದಿನ ತನಗೆ ನೀಡಲಾಗುತ್ತಿದ್ದ ಪಾನೀಯವನ್ನು ನೀಡದೇ ಇರುವುದಕ್ಕೆ  ಅಸಮಾಧಾನಗೊಂಡಿದ್ದ ಪ್ರಾಣಿ  ಈ ರೀತಿಯಾಗಿ ವರ್ತಿಸಿದೆ ಎಂದು ಕ್ಯಾಂಟೊ ತಿಳಿಸಿದ್ದಾರೆ. 
 
ಪ್ರತಿದಿನ ಮಿಲೆಸ್ಕಿ ಆ ಪ್ರಾಣಿಗೆ ಕೋಕೋಕೋಲಾವನ್ನು ನೀಡುತ್ತಿದ್ದ, ಆದರೆ ಅಂದು ಆತ ಅದನ್ನು ನೀಡಲಿಲ್ಲ ಎಂದು ಸಹ ಹೇಳಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ