ಶರಣಾಗಲು ಸಮಯ ಕೊಡಲಾಗದು: ಶಶಿಕಲಾಗೆ ಸುಪ್ರೀಂ ಕೋರ್ಟ್ ತಾಕೀತು

ಬುಧವಾರ, 15 ಫೆಬ್ರವರಿ 2017 (11:22 IST)
ನವದೆಹಲಿ: ಅನಾರೋಗ್ಯದ ನೆಪವೊಡ್ಡಿ ಶರಣಾಗಲು ಸಮಯಾವಕಾಶ ಕೋರಲು ಬಯಸಿದ್ದ ಶಶಿಕಲಾ ನಟರಾಜನ್ ಗೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದೆ. ನಿನ್ನೆ ನೀಡಿದ ತೀರ್ಪು ಅಂತಿಮ ಎಂದಿದೆ.

 
ನಿನ್ನೆ ನೀಡಿದ ತೀರ್ಪಿನಲ್ಲಿ ಯಾವುದೇ ಬದಲಾವಣೆ ಮಾಡಲಾಗದು. ಅದುವೇ ಅಂತಿಮ. ತೀರ್ಪಿನಲ್ಲಿ ಹೇಳಿದಂತೆ ಕೂಡಲೇ ನ್ಯಾಯಾಲಯಕ್ಕೆ ಶರಣಾಗಬೇಕು. ನೆಪ ಹೇಳಿಕೊಂಡು ಕೂರಬಾರದು. ಅದಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಾಖಂಡಿತವಾಗಿ ಹೇಳಿದೆ.

ಇದರಿಂದ ತಮ್ಮ ವಕೀಲರ ಮೂಲಕ ಸಮಯಾವಕಾಶ ಕೋರಲು ಬಯಸಿದ್ದ ಶಶಿಕಲಾಗೆ ಹಿನ್ನಡೆಯಾಗಿದೆ.  ಬಂಧನಕ್ಕೊಳಗಾಗುವ ಮೊದಲೇ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಶಶಿಕಲಾ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಜಯಲಲಿತಾ ಹೊರ ಹಾಕಿದ್ದ ತಮ್ಮ ಸಂಬಂಧಿ ಟಿ ಟಿ ದಿನಕರನ್ ಅವರನ್ನು ಶಶಿಕಲಾ ಎಐಎಡಿಎಂಕೆ ಪಕ್ಷದ ಉಪ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ