ಕಾಂಗ್ರೆಸ್‌ಗೆ ವಿಷಯಾಧಾರಿತ ಬೆಂಬಲ ಆದ್ರೆ ಮೈತ್ರಿಯಿಲ್ಲ: ಸೀತಾರಾಮ್ ಯಚೂರಿ

ಸೋಮವಾರ, 29 ಜೂನ್ 2015 (13:18 IST)
ಕಾಂಗ್ರೆಸ್ ಪಕ್ಷಕ್ಕೆ ವಿಷಯಾಧಾರಿತ ಬೆಂಬಲ ನೀಡಲು ಸಿದ್ದರಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದೊಂದಿಗೆ ಮಾತ್ರಿ ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಮುಖಂಡ ಸೀತಾರಾಮ್ ಯಚೂರಿ ಹೇಳಿದ್ದಾರೆ.   
 
ಕೆಲ ಮಹತ್ವದ ವಿಷಯಗಳ ಬಗ್ಗೆ ಸರಕಾರದ ವಿರುದ್ಧ ವಿಪಕ್ಷಗಳೊಂದಿಗೆ ಸಂಸತ್ತಿನ ಒಳಗೆ ಮತ್ತು ಸಂಸತ್ತಿನ ಹೊರಗೆ ಕೈ ಜೋಡಿಸಲು ಸಿದ್ದರಿದ್ದೇವೆ. ಭೂ ಸ್ವಾಧೀನ ಮಸೂದೆ ಕುರಿತಂತೆ ಕಾಂಗ್ರೆಸ್ ಪಕ್ಷದ ನಿಯೋಗದೊಂದಿಗೆ ರಾಷ್ಟ್ರಪತಿ ಬಳಿ ತೆರಳಿ ದೂರು ನೀಡಿದ್ದೇವೆ. ಮಹತ್ವದ ವಿಷಯಗಳ ಬಗ್ಗೆ ಇತರ ರಾಜಕೀಯ ಪಕ್ಷಗಳಿಗೆ ಸಹಕಾರ ನೀಡಲು ಸಿದ್ದ ಎಂದು ಘೋಷಿಸಿದರು.
 
ಸಂಸತ್ತಿನ ಹೊರಗೆ ಬೆಂಬಲ ನೀಡುವುದಿಲ್ಲ ಎಂದರೆ ಮೈತ್ರಿ ಇಲ್ಲವೆಂದು ಅರ್ಥ. ದೇಶದ ಹಿತಾಸಕ್ತಿಗೆ ಅಗತ್ಯವಾಗಿರುವ ವಿಷಯಗಳ ಬಗ್ಗೆ ಇಕರ ರಾಜಕೀಯ ಪಕ್ಷಗಳೊಂದಿಗೆ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. 
 
ಕಾಂಗ್ರೆಸ್ ಪಕ್ಷದೊಂದಿಗೆ ಹೋರಾಟ ನಡೆಸಲು ಸಿದ್ದರಿದ್ದೀರಾ ಆದರೆ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದೊಂದಿಗೆ ಯಾಕೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಇಂದು ಕೋಮವಾದಿ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ಸೇತರ ಪಕ್ಷಗಳೊಂದಿಗೆ ಹೊಂದಾಣಿಕೆಗೆ ಪಕ್ಷ ಬದ್ದವಾಗಿದೆ ಎಂದರು. 
 
ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ನೀತಿಗಳು ಕಾರ್ಯಕ್ರಮಗಳು ಎಲ್ಲಿಯವರೆಗೆ ಮುಂದುವರಿಯುತ್ತವೆಯೋ ಅಲ್ಲಿಯವರೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ ಸ್ಪಷ್ಟಪಡಿಸಿದರು.
 

ವೆಬ್ದುನಿಯಾವನ್ನು ಓದಿ