ಕಾದಂಬರಿಕಾರ ಚೇತನ್ ಭಗತ್ ಮೇಲೆ ಕೇಸ್ ದಾಖಲು

ಸೋಮವಾರ, 27 ಏಪ್ರಿಲ್ 2015 (09:40 IST)
ಜನಪ್ರಿಯ ಇಂಗ್ಲೀಷ್ ಕಾದಂಬರಿಕಾರ, ಲೇಖಕ ಚೇತನ್ ಭಗತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ

ಕಳೆದ ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾದ "ಹಾಫ್ ಗರ್ಲ್'ಫ್ರೆಂಡ್" ಕಾದಂಬರಿಯಲ್ಲಿ ಅವರು ಬಿಹಾರದ ಗುಮರಾಂವ್ ರಾಜಮನೆತನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ ವಂಶಸ್ಥರೊಬ್ಬರು ಒಂದು ಕೋಟಿ ಪರಿಹಾರ ಧನಕ್ಕೆ ಆಗ್ರಹಿಸಿ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ದಾಖಲಿಸಿದ್ದಾರೆ.
 
ಗುಮರಾಂವ್ ರಾಜಮನೆತನದ ಗಂಡಸರು ಕುಡುಕರು, ಜೂಜುಕೋರರು ಎಂದು ಕಾದಂಬರಿಯಲ್ಲಿ ಬರೆಯಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 
 
ಈ ಆರೋಪವನ್ನು ಅಲ್ಲಗಳೆದಿರುವ ಲೇಖಕ ಚೇತನ್ ಭಗತ್ "ತಮ್ಮ ಕಾದಂಬರಿ ಸಂಪೂರ್ಣವಾಗಿ ಕಾಲ್ಪನಿಕವಾದುದು. ಬಿಹಾರದಲ್ಲಿ ಈ ಹೆಸರಿನ ರಾಜಮನೆತನ ಅಸ್ತಿತ್ವದಲ್ಲಿತ್ತು ಎಂಬುದು ನನಗೆ ಅರಿವೇ ಇರಲಿಲ್ಲ. ನನಗೆ ಯಾರನ್ನೂ ದೂಷಣೆ ಮಾಡುವ ಉದ್ದೇಶ ಇರಲಿಲ್ಲ", ಎಂದಿದ್ದಾರೆ.
 
ಚೇತನ್ ಭಗತ್ ತಮ್ಮ ಜನಪ್ರಿಯ ಕಾದಂಬರಿ "ಹಾಫ್ ಗರ್ಲ್'ಫ್ರೆಂಡ್"‌ ಸರಿಯಾಗಿ ಇಂಗ್ಲೀಷ್ ಬಾರದ ಬಿಹಾರಿ ಯುವಕ ದೆಹಲಿಯ ಪ್ರತಿಷ್ಠಿತ ಮನೆತನದ ಯುವತಿಯನ್ನು ಪ್ರೀತಿಸುವ ಕಥೆಯನ್ನು ಹೊಂದಿದೆ.
 
ಈ ಕಾದಂಬರಿ ಸಿನಿಮಾ ಕೂಡ ಆಗುತ್ತಿದ್ದು, ಮೋಹಿತ್ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. 2 ಸ್ಟೇಟ್ಸ್ ಸೇರಿದಂತೆ ಅವರ ಇತರ ಕಾದಂಬರಿಗಳನ್ನು ಆಧರಿಸಿ ಸಹ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ