ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಒಂದು ದಿನಕ್ಕೆ ಬ್ಯಾಂಕಿಗೆ ಹಣ ಹೂಡುವ ಮಿತಿಯನ್ನು 2.5 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತ ಕಟ್ಟುವವರು ಅದರ ಎರಡರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಬೇಕು. ಇದರಿಂದ ಸಣ್ಣ ಹೂಡಿಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಈಗಾಗಲೇ ಈ ನಿಯಮಾವಳಿ ಜಾರಿಗೆ ಬಂದಿದ್ದು, ಅಗತ್ಯ ಬಿದ್ದಲ್ಲಿ ಬ್ಯಾಂಕ್ ನೌಕರರೆ ಸಹಾಯ ಮಾಡಲಿದ್ದಾರೆ. ಬ್ಯಾಂಕುಗಳು ಹೆಚ್ಚುವರಿ ಸಮಯ ಕೆಲಸ ಮಾಡಲಿದ್ದು, ಗ್ರಾಹಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಆರ್ಬಿಐ ಮೂಲಕವೇ ಬ್ಯಾಂಕುಗಳಿಗೆ ಈ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಿತಿಗಿಂತ ಹೆಚ್ಚು ಹೂಡಿಕೆ ಮಾಡಿದವರಿಗೆ ಶೇ. 200ರಷ್ಟು ದಂಡ ವಿಧಿಸಲು ಚಿಂತನೆ ನಡೆಸಲಾಗಿದೆ. ಉದಾಹರಣೆಗೆ, 1 ಕೋಟಿ ಡೆಪಾಸಿಟ್ ಮಾಡಿದರೆ, 2 ಕೋಟಿ ದಂಡ ಕಟ್ಟಬೇಕು. ಇನ್ನು ಕೆಲವೇ ತಿಂಗಳಲ್ಲಿ 1000 ರೂ.ನ ಹೊಸ ನೋಟು ಕೂಡಾ ಬರಲಿದೆ. ಅದು ಕೂಡಾ ಹೊಸ ವಿನ್ಯಾಸ ಮತ್ತು ಹೊಸ ಬಣ್ಣದಲ್ಲಿ . ಸಣ್ಣ ಪ್ರಮಾಣದ ಹೂಡಿಕೆದಾರರು ಯಾವ ಆತಂಕ ಪಡಬೇಕಿಲ್ಲ. ಉತ್ತರದಾಯಿತ್ವ ಇಲ್ಲದ ಹಣದ ವಿರುದ್ಧ ಕಠಿಣ ಕ್ರಮ, ಸರಿಯಾದ ಆರ್ಥಿಕ ಮೂಲ ತೋರಿಸಿದವರಿಗೆ ಸಮಸ್ಯೆ ಎದುರಾಗದು. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.