ಓಟಿಗಾಗಿ ನೋಟು ಪ್ರಕರಣ: ರೇವಂತ್ ರೆಡ್ಡಿಗೆ ಜಾಮೀನು ಮಂಜೂರು

ಮಂಗಳವಾರ, 30 ಜೂನ್ 2015 (11:32 IST)
ಓಟಿಗಾಗಿ ನೋಟು ಪ್ರಕರಣದ ಪ್ರಮುಖ ಆರೋಪಿ ಶಾಸಕ ಎ.ರೇವಂತ್ ರೆಡ್ಡಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಕೈಗೆತ್ತಿಕೊಂಡಿದ್ದ ತೆಲಂಗಾಣ ಹೈಕೋರ್ಟ್ ಟಿಡಿಪಿ ಪಕ್ಷದ ಮೂವರು ಆರೋಪಿ ಶಾಸಕರುಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. 
 
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಪ್ರಕರಣದ ಆರೋಪಿಗಳಾದ ಮೆಹಬೂಬ್ ನಗರ ಜಿಲ್ಲೆಯ ಕೊಡಂಗಾಲ್ ವಿಧಾನಸಭಾ ಕ್ಷೇತ್ರದ ಶಾಸಕ ಎ.ರೇವಂತ್ ರೆಡ್ಡಿ ಹಾಗೂ ಇತರೆ ಇಬ್ಬರು ಆರೋಪಿ ಶಾಸಕರುಗಳಾದ ಉದಯ್ ಸಿಂಹ ಮತ್ತು ಸೆಬಾಸ್ಟಿಯನ್ ಹ್ಯಾರಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
 
ಪ್ರಕರಣದ ಹಿನ್ನೆಲೆ: ವಿಧಾನಪರಿಷತ್ ಚುನಾವಣೆಗೆ ಮತದಾನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಆಂಗ್ಲೋ ಇಂಡಿಯನ್ ನಾಮ ನಿರ್ದೇಶಿತ ಸದಸ್ಯ ಎಲ್ವಿಸ್ ಸ್ಟೀಫನ್ಸನ್ ಅವರಿಗೆ ಅವರ ನಿವಾಸದಲ್ಲಿಯೇ 50 ಲಕ್ಷ ರೂ. ಲಂಚ ಕೋಡುತ್ತಿದ್ದಾಗ ಸಿಕ್ಕಿಬಿದ್ದರು. 
 
ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದ ತೆಲಂಗಾಣ ಭ್ರಷ್ಟಾಚಾರ ದಳದ ಪೊಲೀಸರು, ಮೂವರೂ ಆರೋಪಿಗಳನ್ನು ಮೇ 31ರಂದು ಬಂಧಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೂವರೂ ಆರೋಪಿಗಳನ್ನೂ ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಂದು ಜಾಮೀನು ಮಂಜೂರು ಮಾಡಲಾಗಿದೆ. 
ಇನ್ನು ಈ ಹಿಂದೆಯೂ ಕೂಡ ಶಾಸಕ ರೇವಂತ್ ರೆಡ್ಡಿ ಅವರಿಗೆ 12 ಗಂಟೆಗಳ ಅವಧಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆದ್ದರಿಂದ ಇದು ಅವರಿಗೆ ನೀಡಿರುವ ಎರಡನೇ ಜಾಮೀನಾಗಿದೆ. 

ವೆಬ್ದುನಿಯಾವನ್ನು ಓದಿ