ಎಟಿಎಂ ವಿತ್‌ಡ್ರಾ ಮಿತಿ ನಾಳೆಯಿಂದ 4,500

ಶನಿವಾರ, 31 ಡಿಸೆಂಬರ್ 2016 (11:56 IST)
ನವೆಂಬರ್ 8ರರಂದು ನೋಟು ನಿಷೇಧವಾದ ಬಳಿಕ ಹಣಕ್ಕಾಗಿ ಪರದಾಡುತ್ತಿದ್ದ ಗ್ರಾಹಕರಿಗೆ ನಾಳೆಯಿಂದ ಸ್ವಲ್ಪ ಮಟ್ಟಿನ ರಿಲೀಫ್ ಸಿಗಲಿದೆ. ಜನವರಿ 1 ರಿಂದ ಎಟಿಎಂ ವಿತ್‌ಡ್ರಾ ಮಿತಿಯನ್ನು ಆರ್‌ಬಿಐ 2,500ದಿಂದ 4,500ಕ್ಕೆ ಹೆಚ್ಚಿಸಿದೆ. 
 
ಇದುವರೆಗೂ ಎಟಿಎಂಗಳಲ್ಲಿ 2,500 ರೂಪಾಯಿಯನ್ನು ಮಾತ್ರ ವಿತ್‌ಡ್ರಾ ಮಾಡಬಹುದಿತ್ತು. ಹೊಸ ವರ್ಷಕ್ಕೆ ಆ ಮಿತಿಯನ್ನು 4,500ಕ್ಕೆ ಹೆಚ್ಚಿಸಲಾಗಿದೆ. ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. 
 
ಆದರೆ ವಾರಕ್ಕೆ ವಿತ್‌ಡ್ರಾ ಮಾಡುವ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈಗಿರುವ 24,000 ರೂ ವಿತ್‌ಡ್ರಾ ಮಿತಿಯೇ ಮುಂದುವರೆಯಲಿದೆ. 
 
ಇನ್ನು ರದ್ದಾದ 500 ಮತ್ತು 1,000 ರೂಪಾಯಿ ಹಳೆ ನೋಟುಗಳನ್ನು ಡಿಪಾಸಿಟ್ ಮಾಡುವ ಕೊನೆದಿನ ನಿನ್ನೆಯೇ ಮುಗಿದಿದೆ. ಇನ್ನು ಮುಂದೆ ಹಳೆಯ ನೋಟುಗಳನ್ನು ಆರ್‌ಬಿಐ ಕೌಂಟರ್‌ಗಳಲ್ಲಿ ಮಾತ್ರ ಡೆಪಾಸಿಟ್ ಮಾಡಬಹುದು. ಇದಕ್ಕೆ ಮಾರ್ಚ್ 31ರವರೆಗೆ ಸಮಯವಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ